ಎಪಿಎಂಸಿ ಚುನಾವಣೆಗೆ ಜೆಡಿಎಸ್ ಪ್ರಚಾರ ಶುರು
ಚಿಕ್ಕಬಳ್ಳಾಪುರ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಚುನಾವಣೆಗೆ ಜೆಡಿಎಸ್ ಸಹ ಭರ್ಜರಿ ಪ್ರಚಾರವನ್ನು ಪ್ರಾರಂಭಿಸಿದ್ದು ತಾಲೂಕಿನ ಐತಿಹಾಸಿಕ ಶ್ರೀ ಭೋಗನಂದೀಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಮಾಡಿ ಪ್ರಚಾರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮಾತನಾಡಿ, ಇದೇ 15 ರಂದು ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಚುನಾವಣೆಗೆ ನಡೆಯಲಿದ್ದು ರೈತಪರ ಒಲವನ್ನು ಹೊಂದಿರುವ ತಮ್ಮ ಜೆಡಿಎಸ್ ಅಭ್ಯರ್ಥಿಗಳಿಗೆ ಹೆಚ್ಚಿನ ಮತವನ್ನು ನೀಡಿ ಗೆಲ್ಲಿಸಬೇಕೆಂದು ಕೋರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ, ಜೆಡಿಎಸ್ ರೈತ ಪರವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು ಪಿಎಲ್ಡಿ ಬ್ಯಾಂಕ್ ಮೂಲಕ ರೈತರಿಗೆ ಸಾಲ ಸೌಲಭ್ಯ ಸೇರಿದಂತೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಿ ರೈತರ ನೆರವಿಗೆ ಸ್ಪಂದಿಸಲಾಯಿತು. ದಿ. ರೈತ ನಾಯಕ ಕೆ.ಬಿ. ಪಿಳ್ಳಪ್ಪನವರು ಇಂದಿಗೂ ತಮ್ಮ ಹೆಸರನ್ನು ಉಳಿಸಿಕೊಂಡು ಜನರ ಮನಸ್ಸಿನಲ್ಲಿದ್ದಾರೆ ಎಂದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಚದಲುಪುರ ಎನ್. ನಾರಾಯಣಸ್ವಾಮಿ ಮಾತನಾಡಿ, ಇದುವರೆಗೂ ಸಂಘವು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಉತ್ತಮ ರೀತಿಯಲ್ಲಿ ರೈತರಿಗೆ ಸ್ಪಂದಿಸುತ್ತಾ ಬಂದಿದ್ದ್ದುಮುಂಬರುವ ಚುನಾವಣೆಯಲ್ಲಿ ಸಂಘದ ಪಾವಿತ್ರ್ಯ ಮತ್ತು ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತದಾರರು ಜೆಡಿಎಸ್ಗೆ ಬೆಂಬಲ ನೀಡಬೇಕೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಟಿ. ನಾರಾಯಣಸ್ವಾಮಿ, ಮುನಿರಾಜು, ಶ್ರೀನಿವಾಸ್, ಕೆ.ಆರ್. ರೆಡ್ಡಿ, ಚನ್ನಬೈರೇಗೌಡ, ಮುನೇಗೌಡ, ನಂದಿ ಮೂರ್ತಿ, ಸೊಣ್ಣೇಗೌಡ, ನಾರಾಯಣಸ್ವಾಮಿ, ರಾಮಲಿಂಗರಾಜು, ಚನ್ನಕೇಶವ ಮುಂತಾದವರು ಉಪಸ್ಥಿತರಿದ್ದರು.
ಅಭ್ಯರ್ಥಿಗಳ ಪಟ್ಟಿ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ 8 ಸ್ಥಾನಗಳಿಗೆ ಜೆಡಿಎಸ್ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು ಈರಚಿನ್ನಪ್ಪ, ಡಿ.ವಿ. ಕೌಸಲ್ಯ, ಕೆ.ಆರ್. ಚಂದ್ರಶೇಖರ್, ಟಿ.ಜೆ. ಸಬಿತಬಾಬು, ಆರ್. ಚಂದ್ರಶೇಖರ್, ರಾಮಚಂದ್ರ, ಕೆ.ವಿ. ವಾಸುದೇವ್, ಕೆ.ಎನ್. ಶ್ರೀನಿವಾಸ್ ಕಣದಲ್ಲಿದ್ದಾರೆ.