ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸಿ
ಬಂಗಾರಪೇಟೆ: ಪೋಷಕರು ಉಚಿತ ಸೌಲಭ್ಯಗಳಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಹುದುಕುಳ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆ ಆವರಣದಲ್ಲಿ ರಾಷ್ಟ್ರೀಯ ಮಾಧ್ಯಮ ಸಮಿತಿ ಹಾಗೂ ರಾಜ್ಯ ವಿಶೇಷ ಘಟಕ ಯೋಜನೆಯಲ್ಲಿ ರು. 83ಲಕ್ಷ ವೆಚ್ಚದಲ್ಲಿ 7ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸರ್ಕಾರಿ ಶಾಲೆಗಳೆಂದರೆ ಹಿಂದೆ ಎಲ್ಲರೂ ಮುಗು ಮುರಿಯುವಂತ ಕಾಲವಿತ್ತು. ಆದರೆ ಈಗ ಅಂತಹ ವಾತಾವರಣ ಬದಲಾಗಿದೆ. ಕಾನ್ವೆಂಟ್ಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಈ ಹಿನ್ನೆಲಯಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ ಎಂದರು.
ಜಿಪಂ ಸದಸ್ಯ ಎಂ.ಎಸ್. ಆನಂದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪದ್ಮನಾಭ್ ಮಾತನಾಡಿದರು. ಶಿಕ್ಷಣಾಧಿಕಾರಿ ಕೆ. ಜಯರಾಜ್,ಪಂ-ಅಧ್ಯಕ್ಷೆ ಅನಿತಾ ಚಂದ್ರಯ್ಯಶೆಟ್ಟಿ, ತಾಪಂ ಉಪಾಧ್ಯಕ್ಷ ಸಂಪಂಗಿರೆಡ್ಡಿ, ಸದಸ್ಯ ಅಮರೇಶ್, ರವಿ, ವೆಂರಟೇಶಪ್ಪ, ಪ್ರಕಾಶ್ ಇದ್ದರು.