ಸರ್ಕಾರಿ ಆಸ್ಪತ್ರೆಗೆ ಶಾಸಕರ ಭೇಟಿ
ಮುಳಬಾಗಲು: ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಡರೋಗಿಗಳಿಂದ ಹಣ ವಸೂಲಿ ಮಾಡಕೂಡದು ಹಾಗೂ ರೋಗಿಗಳಿಗೆ ತೊಂದರೆ ಕೊಡಕೂಡದು ಎಂದು ತಾಖೀತು ಮಾಡಿ, ಶುಶ್ರೂಶಕರು ಸೇವೆ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದರು. ಬಾಣಂತಿಯರಿಗೆ ಮಡಿಲು ಕಿಟ್ಟು ನೀಡುತ್ತಿಲ್ಲವೆಂಬ ದೂರಿನ ಮೇರೆಗೆ ಕೂಡಲೇ ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಮಡಿಲು ಕಿಟ್ಟು ತರಿಸಿ ವಿತರಿಸಲು ಕ್ರಮ ತೆಗೆದೆಕೊಂಡರು.
ನಾಯಿ ಕಡಿತಕ್ಕೆ ಚುಚ್ಚುಮದ್ದು ಹೊರಗಿನಿಂದ ತರುವಂತೆ ಚೇಟಿ ಬರೆದು ಕಳುಹಿಸುವುದನ್ನು ನಿಲ್ಲಿಸಿ ಆಸ್ಪತ್ರೆಯಲ್ಲಿಯೇ ಲಸಿಕೆ ವ್ಯವಸ್ಥೆ ಮಾಡಲು ಸೂಚಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್, ಡಿವೈಎಸ್ಪಿ ಸಿದ್ದಪ್ಪ ಇದ್ದರು.