ಸ್ವಚ್ಛತೆಗೆ ಸಾರ್ವಜನಿಕರೂ ಸಹಕರಿಸಬೇಕು
ಕಪ್ರ ವಾರ್ತೆ ಮುಳಬಾಗಲು ಅ.11
ಪುರಸಭೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಸಾರ್ವಜನಿಕರು ನೈರ್ಮಲ್ಯ ಕಾಪಾಡಲು ಸಾರ್ವಜನಿಕರ ಸಹಕಾರ ಮುಖ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್ ಹೇಳಿದರು.
ಪಟ್ಟಣದ ಶಿವಕೇಶವ ಸಭಾಂಗಣದಲ್ಲಿ ಸ್ವರ್ಣ ಜಯಂತಿ ರೋಜ್ಗಾರ್ ಯೋಜನೆಯಡಿ, ಪುರಸಭೆ ಮತ್ತು ಶಿವಕೇಶವ ಸಂಘದಿಂದ ಶುಕ್ರವಾರ ಆರೋಗ್ಯ ಶಿಕ್ಷಣ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಶಿಬಿರದಲ್ಲಿ ಮಾತನಾಡಿ, ನೈರ್ಮಲ್ಯ ಕಾಪಾಡುವ ಹಂತದಲ್ಲಿ ಹಂದಿಗಳನ್ನು ಆಚೆ ಸಾಗಿಸುವ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತವಾಗುವುದನ್ನು, ಕೋತಿಗಳನ್ನು ಬೇರೆಗೆ ಸಾಗಿಸುವಾಗ, ಸಾರ್ವಜನಿಕರಿಗೆ ತೊಂದರೆ ಕೊಡುವ ಬೀದಿ ನಾಯಿಗಳನ್ನು ಸ್ಧಳಾಂತರಿಸುವಾಗ ಎದುರಾಗುವ ಪ್ರತಿರೋಧಗಳನ್ನು ವಿವರಿಸಿದರು.
ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದ ಪುರಸಭೆ ಸದಸ್ಯ ಜಿ. ಠಾಕೂರ್ ಸಿಂಗ್, ಪಟ್ಟಣದ ಅಭಿವೃದ್ಧಿಗೆ ಪುರಸಭೆ ಬದ್ದವಾಗಿದೆ ಎಂದರು. ವೈದ್ಯರಾದ ಡಾ. ಹರೀಶ್, ಮಹಿಳೆಯರ ಆರೋಗ್ಯದ ಕುರಿತು ಮಾತನಾಡಿದರು.
ಸಮುದಾಯ ಅಭಿವೃದ್ಧಿ ಸಂಘದ ಅಧ್ಯಕ್ಷೆ ಆರ್. ಗೀತಾ, ಸಮಾದಾಯ ಸಂಘಟನಾಧಿಕಾರಿ ಎಚ್. ಶ್ರೀನಿವಾಸ್, ಶಿವಕೇಶವ ಸಂಘದ ಪ್ರತಿನಿಧಿಗಳಾದ ಮೈತ್ರಿ ನಾಗರಾಜರಾವ್, ಮಂಜುಶ್ರೀ, ಭಾರತಿ ಇದ್ದರು.