ಆರ್ಎಸ್ಎಸ್ ಪಥ ಸಂಚಲನ
ಚಿಂತಾಮಣಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾವಿರಾರು ಯುವಕರು ಶನಿವಾರ ಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಾ ವರ್ಗ ಪಥ ಸಂಚಲನ ನಡೆಸಿದರು.
ಪಟ್ಟಣದ ಗಜಾನನ ವೃತ್ತದ ಬಳಿ ಇರುವ ಥಿಯಾಸಪಿಕಲ್ ಸೊಸೈಟಿಯಿಂದ ಭಾರತ ಮಾತೆಯ ವಿಜಯ ಘೋಷಗಳೊಂದಿಗೆ ಪಥ ಸಂಚಲನ ನಡೆಸಿದರು. ಮಾರ್ಗದಲ್ಲಿ ಮಾತೆಯರು ಮನೆಯ ಮುಂದೆ ರಂಗೋಲಿ ಹಾಕಿ ದೇಶಭಕ್ತ ಹಾಗೂ ದೇವರ ಫೋಟೋಗಳು ಇಟ್ಟು ಸ್ವಾಗತಿಸಿ ಭಗಧ್ವಜಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ಮುಖ್ಯ ಭಾಷಣಗಾರರಾಗಿ ರಾಷ್ಟ್ರೀಯ ಸ್ವಯಂ ಸೇವಕ ಪ್ರಾಂತ ಕಾರ್ಯಕಾರಣಿ ಸದಸ್ಯ ವೆಂಕಟೇಶ್ ಪಾಠಕ್, ಕಾರ್ಯಕ್ರಮದ ಅಧ್ಯಕ್ಷತೆ ಲಕ್ಷ್ಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎನ್. ನರಸಿಂಹರೆಡ್ಡಿ, ಶಿಬಿರಾರ್ಥಿಗಳಾದ ರಾಜಶೇಖರ್.ವಿ ಯಾಗಂಟಿ ತಾಲೂಕು ಬಿಜೆಪಿ ಮುಖಂಡ ಅಟ್ಟೂರು ಮಂಜುನಾಥ್, ಅಪ್ಪೋಜಿರೆಡ್ಡಿ, ಮಾಡಿಕೆರೆ ಅರುಣ್ ಕುಮಾರ್, ಕುರುಟಹಳ್ಳಿ ಮಂಜುನಾಥ್, ಪ್ರಕಾಶ್, ಬ್ಯಾಲಹಳ್ಳಿ ಆಂಜನೇಯರೆಡ್ಡಿ ಭಾಗವಹಿಸಿದ್ದರು.