ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಎಲ್ಲ ದಾನಗಳಿಗಿಂತಲೂ ರಕ್ತದಾನ ಶ್ರೇಷ್ಠ'

Rashmi Kasaragodu
Updated On : 12 Oct 2013, 11:21 am

ಮುಳಬಾಗಲು: ಎಲ್ಲಾ ದಾನಗಳಿಗಿಂತಲೂ ರಕ್ತದಾನ ಶ್ರೇಷ್ಠತೆ ಪಡೆದಿದೆ ಎಂದು ಮುಳಬಾಗಲು ರೋಟರಿ ಸೆಂಟ್ರಲ್ ಅಧ್ಯಕ್ಷ ವಿ.ಆರ್. ಪ್ರಭಾಕರ್ ಗುಪ್ತ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಎನ್ಎಸ್ಎಸ್, ಎನ್ಸಿಸಿ, ರೆಡ್ ಕ್ರಾಸ್ ಯುನಿಟ್ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಉದ್ಫಾಟಿಸಿ ಮಾತನಾಡಿ, ರಾಜ್ಯದಲ್ಲಿ ಪ್ರತಿ ದಿನ 800 ರಿಂದ 1100 ಯುನಿಟ್ ರಕ್ತದ ಅವಶ್ಯಕತೆ ಇದ್ದು ಶೇ.80 ರಷ್ಟು ಮಾತ್ರ ರಕ್ತ ಪೊರೈಕೆಯಾಗುತ್ತಿದ. ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಮೀರ್ ಅಹಮದ್, ರಕ್ತದಾನ ಮಾಡಲು ಹೆಚ್ಚಿನ  ವಿದ್ಯಾರ್ಥಿಗಳು ಮುಂದೆ ಬಂದಿರುವುದು ಶ್ಲಾಘನೀಯ ಎಂದರು. ಮುಳಬಾಗಲು ರೋಟರಿ ಸೆಟ್ರಂಲ್ ಕಾರ್ಯದರ್ಶಿ ಪಿ.ಎಸ್. ರಮೇಶ್, ಉಪಾಧ್ಯಕ್ಷ ಬಿ.ಎಸ್. ರಮೇಶ್, ಕೆ.ವಿ. ಪುರುಷೋತ್ತಂ, ಎನ್ಎಸ್ಎಸ್ ಅಧಿಕಾರಿ ಕೆ.ಎನ್.ಶ್ರೀನಿವಾಸಯ್ಯ, ಕೆ. ಪ್ರಕಾಶ್, ಎ. ಅಪ್ಪಾಜಿಗೌಡ, ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement