ಚಿನ್ನದಂಗಡಿ ಕಳವಿಗೆ ಯತ್ನ
ಚಿಂತಾಮಣಿ: ಚಿನ್ನ, ಬೆಳ್ಳಿ ಅಂಗಡಿಗೆ ರಾತ್ರಿ ವೇಳೆ ರೋಲಿಂಗ್ ಶೆಟ್ಟರ್ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಪಟ್ಟಣದ ಡೈಮಂಡ್ ಟಾಕೀಸ್ ರಸ್ತೆಯ ಪದ್ಮಾವತಿ ಜೂಯಲರಿಯಲ್ಲಿ ನಡೆದಿದೆ. ಅಂಗಡಿ ಮಳಿಗೆಯ ರೋಲಿಂಗ್ ಶೆಟ್ಟರ್ ಕಬ್ಬಿಣದ ರಾಡ್ನಿಂದ ಮೀಟಿ ಒಳ ನುಗ್ಗಿ ಕಳ್ಳತನ ಮಾಡಲು ವಿಫಲಗೊಂಡಿರುವ ಘಟನೆ ಬಗ್ಗೆ ಅಂಗಡಿ ಮಾಲೀಕ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿದ ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿರುವುದಾಗಿ ತಿಳಿದು ಬಂದಿದೆ.