ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿನ್ಮಯ ವಿದ್ಯಾಲಯದಲ್ಲಿ ಮಾತೃಪೂಜೆ

Rashmi Kasaragodu
Updated On : 12 Oct 2013, 11:28 am

ಕೋಲಾರ: ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಚಿನ್ಮಯ ವಿದ್ಯಾಲಯದಲ್ಲಿ ಮಾತೃಪೂಜೆ ವಿಜೃಂಭಣೆಯಿಂದ ನಡೆಯಿತು.
ನೂರಾರು ಮಕ್ಕಳು ತಮ್ಮ ಮಮತೆಯ ತಾಯಂದಿರಿಗೆ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.
ರವೀಂದ್ರ ಭಟ್ ಹಾಗೂ ಸುರೇಶ್ರ ವೇದಘೋಷಗಳೊಂದಿಗೆ ಮಾತೃಪೂಜೆ ಆರಂಭಗೊಂಡು, ಮಕ್ಕಳು ತಮ್ಮ ತಾಯಿಯ ಪಾದ ತೊಳೆದು ಪೂಜಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಚೊಕ್ಕಹಳ್ಳಿಯ ಚಿನ್ಮಯ ಸಾಂಧಿಪನಿ ಆಶ್ರಮದ ಸ್ವಾಮಿ ದತ್ತಪಾದಾನಂದರು ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿಗಿಂತ ಮಿಗಿಲಾದ ಯಾವುದೇ ದೇವರಿಲ್ಲ ಎಂದು ತಿಳಿಸಿದರು.
ಮಾತೃಪೂಜೆಯ ಅವಕಾಶ ಚಿನ್ಮಯ ಶಾಲೆಯ ಮಕ್ಕಳಿಗೆ ದೊರೆತಿರುವುದು ಪುಣ್ಯ ಎಂದು ತಿಳಿಸಿದ ಸ್ವಾಮೀಜಿಗಳು, ಈ ಸಂಪ್ರದಾಯ ಕೇವಲ ನಾಟಕೀಯವಾಗದೇ ತಮ್ಮ ಬದುಕಿನುದ್ದಕ್ಕೂ ತಾಯಿಯನ್ನು ಗೌರವಿಸುವ ಪಾಠ ಕಲಿಸಲಿ ಎಂದು ಹಾರೈಸಿದರು.
ತಾಯಿಯನ್ನು ಗೌರವಿಸಬೇಕೆಂಬ ಸಂಸ್ಕೃತಿ ಮಕ್ಕಳಲ್ಲಿ ಶಾಶ್ವತವಾಗಿ ನೆಲಸಬೇಕು, ಅವರ ಆಶೀರ್ವಾದದಿಂದ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವೆಂಬ ಸತ್ಯವನ್ನು ಮಕ್ಕಳು ಅರಿಯುವಂತಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಿನ್ಮಯ ವಿದ್ಯಾಲಯದ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಚಂದ್ರಪ್ರಕಾಶ್, ಸೋಮೇಶ್ವರಯ್ಯ,  ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಹಾಜರಿದ್ದರು.
ಸಂಸ್ಥೆಯ ಪ್ರಾಂಶುಪಾಲ ನಾರಾಯಣಸ್ವಾಮಿ ಸ್ವಾಗತಿಸಿ, ಅಪರ್ಣ ನಾರಾಯಣ್ ಮತ್ತು ಪಿ.ಎಸ್. ಶೃತಿ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement