ನಾಡ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ
ಬಂಗಾರಪೇಟೆ: ಕೋಲಾರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಡಿ.ಕೆ. ರವಿ ಆಗಮಿಸಿದಾಗಿನಿಂದಲೂ ಎಲ್ಲಾ ಕಡೆ ಮಿಂಚಿನಂತೆ ಸಂಚರಿಸಿ ಸೋಮಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮೂಲಕ ಜಡ್ಡು ಗಟ್ಟಿರುವ ಆಡಳಿತಕ್ಕೆ ಹೊಸ ಆಯಾಮ ನೀಡುತ್ತಿದ್ದಾರೆ.
ತಾಲೂಕಿನ ಬೂದಿಕೋಟೆ ಹೋಬಳಿ ಕೇಂದ್ರದ ಅಟಲ್ ಜೀ ನಾಡ ಕಚೇರಿಗೆ ದಿಢೀರನೆ ಬೇಟಿ ನೀಡಿ ಸಾರ್ವಜನಿಕರ ಕೆಸಲಗಳು ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಿದರು. ನಂತರ ಮಾರ್ಕಂಡೇಯ ಜಲಾಶಯ ವೀಕ್ಷಿಸಿದರು. ನಾಡ ಕಚೇರಿಗೆ ತೆರಳಿ ವಿವಿಧ ಯೋಜನೆಗಳು ವಿಳಂಬವಾಗದೆ ಕಾಲಕಾಲಕ್ಕೆ ಫಲಾನುಭವಿಗಳಿಗೆ ದಕ್ಕುವಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚಿಸಿದರು. ನಂತರ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ರೋಗಿಗಳಿಂದ ವಿವರ ಪಡೆದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ರವಿ ಅವರು, ಅಧಿಕಾರಿಗಳು ಸಾರ್ವಜನಿಕರ ಕೆಲಸಗಳು ವಿಳಂಬವಾಗದಂತೆ ತ್ವರಿತವಾಗಿ ಮಾಡಿ ದೂರುಗಳ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಡಿಸಿ ಜೊತೆ ತಹಸೀಲ್ದಾರ್ ಉಷಾ, ಉಪ ತಹಸೀಲ್ದಾರ್ ರಂಗನಾಥಸ್ವಾಮಿ, ರಾಜಸ್ವ ನಿರೀಕ್ಷಕ ಭಾಸ್ಕರ್, ಶಿವಣ್ಣ ಇದ್ದರು.