ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾರು ಉತ್ಪನ್ನಗಳ ಮಾರಾಟ ಮಳಿಗೆ ಆರಂಭ

Rashmi Kasaragodu
Updated On : 12 Oct 2013, 11:26 am

ಕೋಲಾರ: ನಗರದ ಆರ್ಟಿಒ ಕಚೇರಿಯ ಸಮೀಪ ತೆರೆದಿರುವ ನಾರು ಉತ್ಪನ್ನಗಳ ಮಾರಾಟ ಮಳಿಗೆಯನ್ನು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಶನಿವಾರ ಉದ್ಘಾಟಿಸಿದರು.
ನಾರು ಮಂಡಳಿಯ ಸಹಯೋಗದಲ್ಲಿ ಉತ್ಪಾದನೆ ಮಾಡಿರುವ ನಾರು ಉತ್ಪನ್ನಗಳಿಗೆ ಕೇಂದ್ರ ಸರ್ಕಾರದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಮಂತ್ರಾಲಯ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ.
ಕೋಲಾರದಲ್ಲಿ ನಾರು ಮಂಡಳಿಯ ಉಪ ಕೇಂದ್ರ ಪ್ರಾರಂಭದ ಜೊತೆಗೆ ನಾರು ಉತ್ಪನ್ನಗಳ ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಇದರಿಂದ ಸಾರ್ವಜನಿಕರು ವಿವಿಧ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಸಿಕ್ಕಿದೆ. ಕಾರ್ಪೆಟ್, ಮ್ಯಾಟ್, ದಿಂಬು, ಹಾಸಿಗೆ, ಗೊಬ್ಬರ, ಅಲಂಕಾರಿಕ ವಸ್ತುಗಳು ಸೇರಿದಂತೆ ಹತ್ತಾರು ಬಗೆಯ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಳಿಗೆಯನ್ನು ಉದ್ಘಾಟಿಸಿದರಲ್ಲದೆ ತಮ್ಮ ಮನೆಗೆ ಬೇಕಾದ ಕೆಲ ವಸ್ತುಗಳನ್ನು ಖರೀದಿ ಮಾಡಿದರು.
ನಾರು ಮಂಡಳಿಯ ಸದಸ್ಯ ಹೊಳಲಿ ಪ್ರಕಾಶ್, ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಕುಮಾರ್, ಎಕ್ಬಾಲ್, ನಗರಸಭೆ ಸದಸ್ಯ ಸಲ್ಲಾವುದ್ದೀನ್ ಬಾಬು, ಗೋಪಾಲ್, ನಾರು ಮಂಡಲಿಯ ಅಧಿಕಾರಿಗಳಾದ ಅನಿಲ್ಕುಮಾರ್, ಎಂ. ಕುಮಾರರಾಜ, ಜಿಲ್ಲಾಧಿಕಾರಿ ಡಿ.ಕೆ. ರವಿ ಇದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement