ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾರು ಮಂಡಳಿ ಕಾರ್ಯಕ್ರಮಗಳ ಅನುಷ್ಠಾನ

Rashmi Kasaragodu
Updated On : 12 Oct 2013, 11:26 am

ಕೋಲಾರ: ಇನ್ನು ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ನಾರು ಮಂಡಳಿಯ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಸಚಿವ ಮುನಿಯಪ್ಪ ಪ್ರಕಟಿಸಿದರು.
ತಾಲೂಕಿನ ತಂಬಿಹಳ್ಳಿ ಗ್ರಾಮದಲ್ಲಿ ಶನಿವಾರ ಭಾರತ ಸರ್ಕಾರದ ನಾರು ಮಂಡಳಿಯ ಉಪ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ಕರ್ನಾಟಕದಲ್ಲಿ ಶೇಕಡ 24ರಷ್ಟು ಪ್ರಮಾಣದಲ್ಲಿ ನಾರು ಉತ್ಪನ್ನಗಳ ತಯಾರಿ ಹಾಗೂ ಮಾರಾಟವಾಗುತ್ತಿದ್ದು ಉಳಿದ ಶೇ.76ರಷ್ಟು ಗುರಿ ಸಾಧನೆಗಾಗಿ ನಾರು ಮಂಡಳಿಯ ಸದಸ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸೂಚಿಸಿದರು.
ತೆಂಗಿನ ನಾರಿನಿಂದ ದಾರ ತೆಗೆಯುವ ಯಂತ್ರವನ್ನು ನಾರು ಮಂಡಳಿ ಶೇ.75 ಸಬ್ಸಿಡಿ ದರದಲ್ಲಿ ನೀಡುತ್ತದೆ, ಮಹಿಳಾ ಸ್ವಸಹಾಯ ಸಂಘದವರು ಈ ಯಂತ್ರವನ್ನು ಖರೀದಿ ಮಾಡಿ ನಾರು ದಾರ ತಯಾರಿಸಿ ಇದರಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ವಿದೇಶಿ ವಿನಿಮಯ ಹೆಚ್ಚಿಸಬಹುದಾಗಿದೆ ಎಂದರು. ನಾರು ಮಂಡಳಿಯ ಕಾರ್ಯಕ್ರಮಗಳ ಬಗ್ಗೆ ಜನತೆಯಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾಗಿರುವುದರಿಂದ ಮಂಡಳಿಯನ್ನು ಪ್ರತಿನಿಧಿಸುತ್ತಿರುವ ಸದಸ್ಯರಾದ ಹೊಳಲಿ ಪ್ರಕಾಶ್, ಸಿ. ಗಂಗಾಧರ್ ಮತ್ತು ಟಿ.ಎಂ. ಶಹೀದ್ ಉಳಿದ ಸದಸ್ಯರು ಮತ್ತು ಅಧ್ಯಕ್ಷರ ಸಹಕಾರ ಪಡೆದು ಕೋಲಾರದಲ್ಲಿ ಬೃಹತ್ ವಸ್ತುಪ್ರದರ್ಶನ ಏರ್ಪಡಿಸಬೇಕು, ನಾರು ಪದಾರ್ಥಗಳ ಉತ್ಪಾದನೆ ಮಾಡಲು ಮುಂದೆ ಬರುವವರಿಗೆ ತಮ್ಮ ಇಲಾಖೆಯಿಂದ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗುವುದೆಂದು ಭರವಸೆ ನೀಡಿದರು.
ನಾರು ಬಿಡಿಸುವ, ತೆಂಗಿನ ಚಿಪ್ಪಿನಿಂದ ಹೊಟ್ಟು ತೆಗೆಯುವ ಯಂತ್ರಗಳ ಖರೀದಿಗೆ ಸಬ್ಸಿಡಿ ಸೌಲಭ್ಯ ಉಂಟು, ನಾರು ಯಂತ್ರಗಳ ಪ್ರಾತ್ಯಕ್ಷಿಕೆಗಾಗಿ ಪ್ರತಿ ಗ್ರಾಪಂಗೆ ಒಂದು ಯಂತ್ರವನ್ನು ನೀಡಲು ಚಿಂತನೆ ನಡೆದಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಕಾರ್ಯಕ್ರಮ ರೂಪಿಸಿದಲ್ಲಿ ಯಂತ್ರಗಳನ್ನು ಒದಗಿಸಲು ಸಹಾಯವಾಗುತ್ತದೆ ಎಂದರು. ನಾರು ಮಂಡಳಿಯ ಅಧ್ಯಕ್ಷರು ತೆಂಗಿನ ಸಿಪ್ಪೆಗೆ 1 ರು.ನಿಗದಿ ಮಾಡಿದ್ದಾರೆ. ಇದರಿಂದ ನಾರು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಬಹುದಾಗಿದೆ. ತೆಂಗಿನ ನಾರಿನ ಮೂಲಕ ಅನೇಕ ಉತ್ಪನ್ನಗಳನ್ನು ತಯಾರು ಮಾಡಿ ಮಾರಾಟ ಮಾಡುವುದರಿಂದ ಗುಡಿ ಕೈಗಾರಿಕೆ ಅವಲಂಭಿತರಿಗೆ ಆರ್ಥಿಕ ಶಕ್ತಿ ಬರುತ್ತದೆ ಎಂದ ಸಚಿವರು, ಕರ್ನಾಟಕದಲ್ಲಿ ನಾರು ಉದ್ಯಮ ಬೆಳೆಯಲು ಉತ್ತಮ ವಾತಾವಣ ಇರುವುದರಿಂದ ಕೋಲಾರ ಜಿಲ್ಲೆಯ ರೈತರು ಮಹಿಳಾ ಸಂಘಟನೆಗಳು ನಾರು ಉದ್ಯಮದ ಬೆಳವಣಿಗೆಗೆ ಹೆಚ್ಚಿನ ಆಸಕ್ತಿ ತೋರಬೇಕೆಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement