ರಾಜಕಾಲುವೆ ದುರಸ್ತಿಗೆ ಚಾಲನೆ
ಮಾಲೂರು: ಕಳೆದ ವಾರ ಬಿದ್ದ ಭಾರೀ ಮಳೆಗೆ ಕೊಚ್ಚಿಹೋಗಿದ್ದ ರಾಜಕಾಲುವೆಯನ್ನು ದುರಸ್ತಿಗೊಳಿಸಿ ಹೊಳು ಎತ್ತುವ ಕಾರ್ಯಕ್ಕೆ ಶಾಸಕ ಮಂಜುನಾಥ್ ಗೌಡ ಚಾಲನೆ ನೀಡಿದರು.
ಪಟ್ಟಣದ ದೊಡ್ಡಕೆರೆಯಿಂದ ರೈಲ್ವೇ ನಿಲ್ದಾಣದ ರಸ್ತೆ ವರೆಗಿನ ರಾಜಕಾಲುವೆ ಒತ್ತುವರಿ ತೆರವು ಹಾಗೂ ಹೊಳು ಎತ್ತುವ ಕಾರ್ಯ ಮುಗಿಯುವರೆಗೂ ಸ್ಥಳದಲ್ಲಿದ್ದ ಶಾಸಕ ಮಂಜುನಾಥ್ ಗೌಡ ಮಾತನಾಡಿ, ಪುರಸಭೆ ಸದಸ್ಯರು ಒತ್ತುವರಿಗೆ ಸಹಕಾರ ನೀಡದೆ ಜನತೆಯ ಮೂಲ ಸೌಕರ್ಯ ಒದಗಿಸಿಕೊಡುವ ಬಗ್ಗೆ ಗಮನ ನೀಡಿಬೇಕು. ಪಟ್ಟಣದಲ್ಲಿ ನೈರ್ಮಲ್ಯಕರಣದ ಕೊರತೆ ಕಾಡುತ್ತಿದ್ದು, ಕುಡಿಯುವ ನೀರು ಹಾಗೂ ಸ್ವಚ್ಛತೆ ಕಾಪಾಡುವ ಕಡೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು. ತಹಸೀಲ್ದಾರ್ ಡಾ. ಸುಧಾ, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಕೆ.ವೈ. ನಂಜೇಗೌಡ, ತಾಪಂ ಸದಸ್ಯ ಮೂರ್ತಿ,ಪುರಸಭೆ ಸದಸ್ಯರಾದ ಅಲೂಮಂಜು, ಪ್ರದೀಪ್ ರೆಡ್ಡಿ, ರಮೇಶ್, ಎಇಇ ಬಸವರಾಜು, ಭೋಗೆಗೌಡ, ರಾಜು, ಕಂದಾಯಾಧಿಕಾರಿ ರಮೇಶ್, ಮುನಿಶ್ಯಾಮಿಗೌಡ ಇದ್ದರು.