ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರದಕ್ಷಿಣೆ ಕಿರುಕುಳ; ಪ್ರಕರಣ ದಾಖಲು

Rashmi Kasaragodu
Updated On : 12 Oct 2013, 11:22 am

ಚಿಂತಾಮಣಿ: ವರದಕ್ಷಿಣೆಗೆ ಒತ್ತಾಯಿಸಿ ಹಿಂಸಿಸುತ್ತಿರುವ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಿನ್ನಮಿಂದಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಿನ್ನಮಿಂದಹಳ್ಳಿ ಗ್ರಾಮದ ಶಿವಾರೆಡ್ಡಿ ಎಂಬಾತ ಶ್ರೀಲಕ್ಷ್ಮಿ ಎಂಬವರನ್ನುನ್ನು ಮದುವೆಯಾಗಿದ್ದ ಎನ್ನಲಾಗಿದೆ. ಮದುವೆಯ ಸಂದರ್ಭದಲ್ಲಿ ಗಂಡನಿಗೆ ವರದಕ್ಷಿಣೆ ನೀಡಲಾಗಿತ್ತು.  ಆದರೆ ಪದೇ ಪದೇ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಶಿವಾರೆಡ್ಡಿ ದೈಹಿಕವಾಗಿ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ಶ್ರೀಲಕ್ಷ್ಮಿ ತನ್ನ ಗಂಡ, ಅತ್ತೆ, ಮಾವ, ನಾದನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement