ವಿಜಯದಶಮಿ, ಬಕ್ರಿದ್ ಶಾಂತಿ ಸಭೆ
ಕೆಜಿಎಫ್: ವಿಜಯದಶಮಿ ಹಾಗೂ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಪೊಲೀಸ್ ಉಪರಕ್ಷಣಾಧಿಕಾರಿ ವಿವೇಕಾನಂದ ತಿಳಿಸಿದರು. ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿಸಭೆ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದಲ್ಲಿ ವಾಹನಗಳು ಹೆಚ್ಚಾಗಿದ್ದು ವಾಹನ ಸಂಚಾರವನ್ನು ನಿಯಂತ್ರಿಸಲು ತೊಂದರೆಯಾಗುತ್ತಿದ್ದು ಪ್ರಿಚರ್ಡ್ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡಲು ವಾಹನಗಳನ್ನು ನಗರದೊಳಗೆ ನಿಲ್ಲಿಸಲು ಸ್ಥಳವಿಲ್ಲದ ಕಾರಣ ನಗರದ ಹೊರಭಾಗದ ಕಿಂಗ್ಜಾರ್ಜ್ ಹಾಲ್ ಸಮೀಪ ಹಾಗೂ ಟೆಂಪೊ ನಿಲ್ದಾಣ ಪಕ್ಕದಲ್ಲಿ ಪಾರ್ಕಿಂಗ್ ಸ್ಥಳ ಮಾಡಲು ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಬರ್ಟ್ಸನ್ಪೇಟೆ ಠಾಣಾ ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ, ಪಿಎಸ್ಐ ರಂಗಸ್ವಾಮಯ್ಯ, ಎಲ್. ಆಂಜಪ್ಪ ಸೇರಿದಂತೆ ಆಟೋ, ಬಸ್ ಚಾಲಕರು, ವಿವಿಧ ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಜರಿದ್ದರು.