ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಚಾರ ನಿಯಂತ್ರಕರಿಗೆ ಬೀಳ್ಕೊಡುಗೆ

Rashmi Kasaragodu
Updated On : 12 Oct 2013, 11:27 am

ಚಿಂತಾಮಣಿ: ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಂಚಾರ ನಿಯಂತ್ರಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ಎಂ. ಅಬ್ದುಲ್ ಶಫಿರನ್ನು ಪಟ್ಟಣದ ಕೆಎಸ್ಆರ್ಟಿಸಿ ಘಟಕದ ಕಾರ್ಯಾಲಯದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಇವರು 1977 ರಲ್ಲಿ ಕ.ರಾ.ರ.ಸಾ ನಿಗಮದಲ್ಲಿ ನಿರ್ವಾಹಕರಾಗಿ ಸೇರಿ 2008 ರಲ್ಲಿ ಸಂಚಾರ ನಿಯಂತ್ರಕರಾಗಿ ಬಡ್ತಿ ಪಡೆದರು. ಅಕ್ಟೋಬರ್ 2009 ರಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ನಿಲ್ದಾಣಕ್ಕೆ ಸಂಚಾರ ನಿಯಂತ್ರಕರಾಗಿ ನಿಯೋಜಿಸಲ್ಪಟ್ಟು ಅಂದಿನಿಂದ ಇಂದಿನ ವರೆಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಯಾವುದೇ ರಜೆ ಪಡೆಯದೆ. ತಂಟೆ ತಕರಾರುಗಳಿಲ್ಲದೆ ಅಲ್ಲಿನ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿವೃತ್ತಿ ಹೊಂದಿರುವ ಎಂ. ಅಬ್ದುಲ್ ಶಫಿ ರವರನ್ನು ಸನ್ಮಾನಿಸಿದ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ, ಶಫಿರವರ ಕಾರ್ಯವೈಖರಿ ಹಾಗೂ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಇಲಾಖೆವತಿಯಿಂದ ಅವರಿಗೆ ದೊರೆಯ ಬಹುದಾದ ಸೌಲಭ್ಯಗಳನ್ನು ದೊರಕಿಸಿ ಕೊಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಘಕದ ವ್ಯವಸ್ಥಾಪಕ ವೆಂಕಟೇಶ್, ಲೆಕ್ಕಪತ್ರ ಮೇಲ್ವಿಚಾರಕ ಗುರುನಾಥ ಶುಭ ಹಾರೈಸಿದರು. ಸಮಾರಂಭದಲ್ಲಿ ಚಾಲಕರು, ನಿರ್ವಾಹಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಕೈವಾರ ಯೋಗೆ ಯತೀಂದ್ರರ ಗಾಯನ
ಚಿಂತಾಮಣಿ: ಪಟ್ಟಣದ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮದ ಅಂಗವಾಗಿ ಕೈವಾರ ಯೋಗಿ ನಾರೇಯಣ ಯತೀಂದ್ರರ ಕೃತಿಗಳ ಗಾಯನದ ಸಂಕೀರ್ತನಾ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಸುಮಾರು 2 ಗಂಟೆಗಳ ಕಾಲ ಕೈವಾರ ತಾತಯ್ಯನವರ ಕೃತಿಗಳ ಗಾಯನ ನೀಡಿ ನೆರೆದಿದ್ದ ಸಭಿಕರನ್ನು ಮುಗ್ದಗೊಳಿಸಿದರು. ಹೇಮಕುಮಾರ್ ಪಿಟೀಲು, ವೆಂಕಟರಮಣಯ್ಯ ಮೃದಂಗ ಸಾಥ್ ನೀಡಿದರು. ಬ್ರಹ್ಮಚೈತನ್ಯ ಮಂದಿರದ ಅಧ್ಯಕ್ಷ ಜಿ.ಎಚ್. ವೆಂಕಟೇಶಮೂರ್ತಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿ, ಕೈವಾರ ತಾತಯ್ಯನವರ ಕೃತಿಗಳು ಮುಕ್ತಿಗೆ ಸೋಪಾನವಾಗಿದೆ. ಇಂತಹ ತತ್ವಪದಗಳನ್ನು ಅರ್ಥಮಾಡಿಕೊಂಡು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು. ಬಿ. ರಾಮಮೂರ್ತಿ, ವೈ.ಜಿ. ಅನಂತಶಾಸ್ತ್ರಿ, ಜಿ.ಎಚ್. ರಘುನಾಥ್, ಸಾಹಿತಿ ಜಿ. ಜಯರಾಂ, ಸತ್ಯನಾರಾಯಣಶೆಟ್ಟಿ, ಕೆನರಾಬ್ಯಾಂಕ್ ಅಶ್ವಥ್, ಶಿಕ್ಷಕ ನಾಗೇಶ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement