ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಿವಿವಿ ಕ್ಯಾಂಪಸ್ನಲ್ಲಿ ಶ್ರೀ ಚಂಡಿಕಾ ಮಹಾ ಯಾಗ

Rashmi Kasaragodu
Updated On : 12 Oct 2013, 11:28 am

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಸಿವಿವಿ ಕ್ಯಾಂಪಸ್ನಲ್ಲಿ ನವರಾತ್ರಿಯ ದುರ್ಗಾಷ್ಟಮಿ ಪ್ರಯುಕ್ತ ಶ್ರೀ ಸರ್ವವಿಘ್ನ ನಿವಾರಕ ಮಹಾಗಣಪತಿಯ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥ ಶ್ರೀ ಚಂಡಿಕಾ ಮಹಾ ಯಾಗ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.
ಯಾಗದಲ್ಲಿ ಸುಮಾರು 350 ಕ್ಕೂ ಹೆಚ್ಚಿನ ಸುಮಂಗಳಿಯರು ಸಾಮೂಹಿಕವಾಗಿ ಲಲಿತ ಸಹಸ್ರನಾಮದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಸುಮಂಗಳಿಯರಿಗೆ ಪೂಜಾ ಸಾಮಾಗ್ರಿಗಳನ್ನು ನೀಡಿ ಗೌರವಿಸಲಾಯಿತು. ನವ ದುರ್ಗಿಗಳ ಸಾಮೂಹಿಕ ಪೂಜೆ ಹಾಗೂ ಶ್ರೀ ಚಂಡಿಕಾ ಮಹಾಯಾಗವನ್ನು ಸಾಗರದ ವೇದ ಪಂಡಿತ ಶ್ರೀಧರ್ ಭಟ್ ಹಾಗೂ ನಗರದ ರಾಮಚಂದ್ರರಾವ್, ಬಾಲಚಂದ್ರ ಶರ್ಮ, ಗುರು ಪ್ರಸಾದ್, ಸುಭ್ರಮಣ್ಯ ಸ್ವಾಮಿ ನೆರವೇರಿಸಿದರು. ಸುಖಶಾಂತಿ ಸಮೃದ್ಧಿ ನೀಡಲಿ ಎಂಬ ಉದ್ದೇಶದಿಂದ ಚಂಡಿಕಾ ಮಹಾಯಾಗವನ್ನು ಹಮ್ಮಿಕೊಳ್ಳಲಾಯಿತು ಎಂದು ಕೆ.ವಿ. ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ತಿಳಿಸಿದರು. ಲೀಲಾ ದೇವರಾಜ್, ಗೀತಾಮೂರ್ತಿ, ನಿರ್ಮಲಾಪ್ರಭು ಮತ್ತು ಸುಜಾತಕಿರಣ್, ಬಿ. ಮುನಿಯಪ್ಪ, ಮುನಿಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement