ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಾವಲಂಬಿಗಳಾಗಲು ಮಹಿಳೆಯರಿಗೆ ಸಲಹೆ

Rashmi Kasaragodu
Updated On : 12 Oct 2013, 11:27 am

ಕೋಲಾರ: ಇಂದು ಬೆಳೆಯುತ್ತಿರುವ ನಾಗರಿಕತೆಗೆ ಮತ್ತು ಬೇಡಿಕೆಗೆ ತಕ್ಕಂತೆ ಮಹಿಳೆಯರು ಕೌಶಲ್ಯ ತರಬೇತಿಗಳನ್ನು ಪಡೆದು ಆರ್ಥಿಕ ಬಲವರ್ಧನೆಯೊಂದಿಗೆ ಸಾಮಾಜಿಕವಾಗಿ ಸುಧಾರಣೆ ಪಡೆದುಕೊಳ್ಳುವಂತೆ ಕೋಲಾರ ಎಪಿಎಂಸಿ ಅಧ್ಯಕ್ಷೆ ಕೆ.ಆರ್.ರಾಜೇಶ್ವರಿ ಹರೀಶ್ ಗೌಡ ಕರೆ ನೀಡಿದರು.
ಅವರು ಕುವೆಂಪುನಗರದಲ್ಲಿನ ವೃತ್ತಿಕೌಶಲ ತರಬೇತಿ ಕಾಲೇಜು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ಬ್ಯೂಟಿಷಿಯನ್, ಮೆಹಂದಿ, ಟೈಲರಿಂಗ್ ಕೋರ್ಸ್ಗಳ ನೂತನ ಬ್ಯಾಚುಗಳ ಉದ್ಘಾಟನೆ ಮತ್ತು ಫ್ಯಾಷನ್ಷೋ, ರಂಗೋಲಿ, ಮೆಹಂದಿ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕೋಲಾರ ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಚ್.ಭಾಗ್ಯಲಕ್ಷ್ಮಿ ಮಾತನಾಡಿ, ಮಹಿಳೆ ತನ್ನ ಶೋಷಣಾ ಚೌಕಟ್ಟನ್ನು ಮೀರಿ ಸಮಾಜವನ್ನು ಅರಿತು ಸದೃಢ ಜೀವನ ರೂಪಿಸುವಲ್ಲಿ ಮತ್ತು ಆರ್ಥಿಕ ಸಬಲತೆ ಹೊಂದುವಲ್ಲಿ ಕೌಶಲ್ಯವೆಂಬುದು ಅಸ್ತ್ರವಾಗಲಿದೆ. ಆ ರೀತಿಯ ಬಲಯುತವಾದ ಕೌಶಲ್ಯ ಅಸ್ತ್ರವನ್ನು ಮಹಿಳೆ ಪಡೆಯಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಕರಾದ ಎಂ.ವಿ.ನಾರಾಯಣಸ್ವಾಮಿ ವಹಿಸಿದ್ದರು. ಮಾತಾಶ್ರಯ ಫೌಂಡೇಶನ್ ಅಧ್ಯಕ್ಷೆ ಪಿ.ಮಾಲತಿ ಇದ್ದರು.
ದಸರಾ ವಿಶೇಷವಾಗಿ ಮಹಿಳೆಯರಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಎಲ್.ಅಶೋಕ ಸ್ವಾಗತಿಸಿ, ಜೆ.ಎನ್.ರಾಮಕೃಷ್ಣ ನಿರೂಪಿಸಿ ವಂದಿಸಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement