ಹಾನಿಯಾಗಿದ್ದ ಗ್ರಾಮ ದತ್ತಿಗೆ
ಮಾಲೂರು: ಕಳೆದ ವಾರ ಮಳೆ ನೀರಿನಿಂದ ಹಾನಿಗೆ ಒಳಗಾಗಿದ್ದ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಅಭಿವೃದ್ಧಿಗಾಗಿ ಪಟ್ಟಣದ ಕೈಗಾರಿಕಾ ಪ್ರಾಂಗಾಣದ ಖಾಸಗಿ ಕಾರ್ಖಾನೆ ಡೆಕೂರ ಅಷೋಷಿಯಟ್ ಕಂಪನಿ ದತ್ತು ತೆಗೆದುಕೊಳ್ಳಲಿದೆ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೈಗಾರಿಕಾ ಪ್ರಾಂಗಾಣದಲ್ಲಿದ್ದ ನೀರಿನ ಕೊಳದ ಕಟ್ಟೆ ಒಡದ ಪರಿಣಾಮ ನೀರು ಗ್ರಾಮಗಳಿಗೆ ನುಗ್ಗಿದ್ದು, ಗ್ರಾಮದಲ್ಲಿದ್ದ ರಾಜಕಾಲುವೆಯ ಒತ್ತುವರಿಯೇ ಘಟನೆಗೆ ಕಾರಣ. ಗ್ರಾಮದ ರಾಜಕಾಲುವೆಯನ್ನು ಕಂಪನಿಯವರೇ ತರೆವು ಮಾಡಿಸಿದ್ದು, ಮುಂದೆ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕಂಪನಿಯ ಎಂ.ಡಿ. ಫರೋಖ್ ತಿಳಿಸಿದ್ದಾರೆ ಎಂದರು.
ಕಂಪನಿಯ ಎಂ.ಡಿ. ಫರೊಖ್ ಅಲಿ ಬೇಗ್ ಮಾತನಾಡಿ, ಸಮಾಜ ಸೇವೆ ದೃಷ್ಟಿಯಲಿಟ್ಟುಕೊಂಡು ಕೈಗಾರಿಕೆ ಪ್ರಾರಂಭಿಸಿದ್ದು, ಬರಡು ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು. ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನಯ್ಯ, ಪುರಸಭೆ ಸದಸ್ಯ ಅಲೂಮಂಜು, ಪ್ರದೀಪ್ರೆಡ್ಡಿ, ಕಂಪನಿಯ ವಿತ್ತಲ್ ಎಂ. ಬಾರಾಪತ್ರ ಇದ್ದರು.