ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಲೇಜಿನ ಕಟ್ಟಡಕ್ಕೆ ಹಾನಿ

Vishwanath S
Updated On : 17 Oct 2013, 12:34 pm

ಕೋಲಾರ/ವೇಮಗಲ್: ತಾಲೂಕಿನ ವೇಮಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಪರಿಚಿತರ ಗುಂಪೊಂದು ನುಗ್ಗಿ ಕಿಟಕಿ ಗಾಜುಗಳನ್ನು ಮತ್ತು ಕ್ರೀಡಾಂಗಣದ ಕೊಠಡಿಯ ಬೀಗ ಮುರಿದು ಪರಾರಿಯಾಗಿರುವ ಘಟನೆ ನಡೆದಿದೆ.
ಅ.15ರ ಮಂಗಳವಾರ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದಾಗ ಕಾರಿನಲ್ಲಿ ಬಂದ ನಾಲ್ವರು ಹಾಗೂ ಮೋಟಾರ್ ಬೈಕಿನಲ್ಲಿದ್ದ ಮತ್ತೊರ್ವ ಸೇರಿ ಒಟ್ಟು ಐದು ಮಂದಿ ಕಾಲೇಜಿನ ಕಾವಲುಗಾರನನ್ನು ಬೆದರಿಸಿ ಕಿಟಕಿ ಗಾಜುಗಳನ್ನು ಮುರಿದು ನಂತರ ಕ್ರೀಡಾಂಗಣದ ಕೊಠಡಿ ಬೀಗ ಒಡೆದು ಹಾಕಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ.
ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಸಾಲ ವಾಪಸ್ ಕೇಳಿದ್ದಕ್ಕೆ ಹಲ್ಲೆ: ಆರೋಪ
ಕೋಲಾರ: ಸಾಲ ಮರು ಪಾವತಿ ಮಾಡುವಂತೆ ಕೇಳಿದ್ದಕ್ಕಾಗಿ ನನ್ನ ಹಾಗೂ ಮನೆಯವರ ಮೇಲೆ ಕೀಲುಕೋಟೆಯ ನಿವಾಸಿ ಶ್ರೀನಿವಾಸ್ ಎಂಬುವರು ಗುಂಪುಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆಂದು ಇದೇ ಬಡಾವಣೆಯ ನಿವಾಸಿ ಎ. ನಾಗೇಂದ್ರ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕೀಲುಕೋಟೆಯ ನಿವಾಸಿ ಕನಕಪ್ಪ ಎಂಬುವರು ತಮ್ಮಿಂದ ಸುಮಾರು ಒಂದುವರೆ ವರ್ಷದ ಹಿಂದೆ 10 ಸಾವಿರ ರು. ಸಾಲ ಪಡೆದಿದ್ದರು. ಈ ಹಣವನ್ನು ಹಿಂದುರುಗಿಸುವುದಾಗಿ ಕನಕಪ್ಪನ ಸಹೋದರ ಶ್ರೀನಿವಾಸ್ ಒಪ್ಪಿಕೊಂಡಿದ್ದರು. ಹಣ ನೀಡುವಂತೆ ಮಂಗಳವಾರ ಶ್ರೀನಿವಾಸ್ ಅವರನ್ನು ಕೇಳಿದಾಗ ತಮ್ಮೊಂದಿಗೆ ಜಗಳವಾಡಿದ್ದಲ್ಲದೆ, ಕನಕಪ್ಪ, ಮೂರ್ತಿ, ಮಂಜು, ಮಹಮದ್ಹಾಗೂ ಪಾರ್ವತಿಯವರೊಂದಿಗೆ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆಂದು ತಿಳಿಸಿದ್ದಾರೆ.
ಮನೆಗೆ ನುಗ್ಗಿ ಟಿವಿಯನ್ನು ಒಡೆದು ಹಾಕಿದ್ದಾರಲ್ಲದೆ, ಪತ್ನಿ ಎನ್. ಮುನಿರತ್ನ ಕತ್ತಿನಲ್ಲಿದ್ದ ರು. 1 ಲಕ್ಷ ಬೆಲೆ ಚಿನ್ನದ ಸರವನ್ನು ಸಹ ದೋಚಿದ್ದಾರೆಂದು ಪೊಲೀಸರಿಗೆ ದೂರಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ತಾವು, ಪತ್ನಿ ಹಾಗೂ ತಾಯಿ ನಾರಾಯಣಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಆರೋಪಿಗಳಿಂದ ಜೀವ ಭಯ ಇರುವುದರಿಂದ ರಕ್ಷಣೆ ನೀಡುವಂತೆ ಕೋರಿದ್ದಾರೆ.
ದ್ವಿಚಕ್ರ ವಾಹನ ಡಿಕ್ಕಿ: ವ್ಯಕ್ತಿ ಸಾವು
ಕೆಜಿಎಫ್: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಹಿಂಭಾಗದಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯ ತಲೆಗೆ ತೀವ್ರಗಾಯಗೊಂಡು ಮೃತಪಟ್ಟಿರುವ ಘಟನೆ ಬೇತಮಂಗಲ ಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕದಿರೇಗೊಡನಕೋಟೆ ಗ್ರಾಮದ ನಿವಾಸಿ ನಂಜುಂಡಪ್ಪ ಎಂಬುವರ ಪತ್ನಿ ರತ್ನಮ್ಮ ಎಂಬುವರು ತಮ್ಮ ಸಂಬಂಧಿಕರಾದ ಗೋಪಾಲಪ್ಪ ಅವರೊಂದಿಗೆ ತಮ್ಮ ಸಂಬಂಧಿಕರ ಮದುವೆಗೆ ಹೋಗಿ ರಾತ್ರಿ 9.30 ಗಂಟೆಗೆ ಮನೆಗೆ ಹಿಂತಿರುಗಲು ಬೇತಮಂಗಲ ಮತ್ತು ಕೆಜಿಎಫ್ ಮುಖ್ಯರಸ್ತೆಯಲ್ಲಿ ಇಬ್ಬರೂ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು.
ಆಗ ಹಿಂದಿನಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿಹೊಡೆದ ಪರಿಣಾಮ ಗೋಪಾಲಪ್ಪ ಹಾಗೂ ರತ್ನಮ್ಮಳಿಗೆ ತಲೆಗೆ ಮತ್ತು ಇತರೆ ಕಡೆ ತೀವ್ರ ಗಾಯಗೊಂಡಿದ್ದು, ಇಬ್ಬರನ್ನು ಬೇತಮಂಗಲ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸಾಗಿಸುವಾಗಿ ಗೋಪಾಲಪ್ಪ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬೇತಮಂಗಲ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement