ಅಂದರ್ ಬಾಹರ್; 9 ಜನರ ಬಂಧನ
ಶಿಡ್ಲಘಟ್ಟ: ಪಟ್ಟಣದ ಪ್ಯಾರಾಗಾನ್ ಶಾಲೆಯ ಹಿಂಬಾಗದ ಮೈದಾನದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪುರ ಠಾಣೆ ಪೊಲೀಸರು ದಾಳಿ ಮಾಡಿ ಬಂಧಿಸಿದ ಪ್ರಕರಣ ನಡೆದಿದೆ. ಅಪರಾಧ ವಿಬಾಗದ ಪಿಎಸ್ಐ ಜಗದೀಶ್, ಪುರ ಠಾಣೆ ಪಿಎಸ್ಐ ಪುರುಷೋತ್ತಮ್ ಹಾಗೂ ತಂಡ ದಾಳಿ ನಡೆಸಿ 9 ಜನರನ್ನು ಬಂಧಿಸಿ ಅವರಿಂದ 7,840 ನಗದು ಹಾಗೂ 6 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಬಾಬಾಜಾನ್, ಮುನಿರಾಜು, ಮುನಿರಾಜು. ಹೈದರ್, ಮಂಜುನಾಥ್, ನಾರಾಯಣಸ್ವಾಮಿ, ಚಂದ್ರಶೇಖರ್, ಷಬ್ಬೀರ್, ಸಾದತ್ ಬಂಧಿತರಾಗಿದ್ದು, ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ; ವಾಹನ ಜಖಂ
ಶಿಡ್ಲಘಟ್ಟ: ಬೊಮ್ಮನ ಹಳ್ಳಿ ಗೇಟ್ ಬಳಿ ಬೆಳಗಿನ ಜಾವ ಕ್ಯಾಂಟರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜಖಂ ಗೊಂಡ ಘಟನೆ ನಡೆದಿದೆ. ಆಂಧ್ರದ ಗುಂಟೂರಿನಿಂದ ಚಿಕ್ಕ ಬಳ್ಳಾಪುರದ ವೆಂಕಟಗಿರಿಗೆ ದ್ರಾಕ್ಷಿ ತುಂಬಿಸಲು ಹೋಗುತ್ತಿದ್ದ ಕ್ಯಾಂಟರ್ ಅಪಘಾತದಿಂದಾಗಿ ಜಖಂಗೊಂಡಿದ್ದು, ವಾಹನ ಚಾಲಕ ವೆಂಕಟೇಶ್ ಹಾಗೂ ಕ್ಲೀನರ್ ಗೊಲ್ಲಪುಡಿ ಅನಂದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.