ಬಾಗೇಪಲ್ಲಿ ವೃತ್ತಕ್ಕೆ ವಾಲ್ಮೀಕಿ ವೃತ್ತ ನಾಮಕರಣ
ಚಿಂತಾಮಣಿ: ವಾಲ್ಮೀಕಿ ಸಮಾಜದವರ ಬಹಳ ವರ್ಷಗಳ ಕನಸಾದ ಪಟ್ಟಣದ ವೃತ್ತವೊಂದಕ್ಕೆ ಮಹರ್ಷಿ ವಾಲ್ಮೀಕಿ ವೃತ್ತವೆಂದು ನಾಮಕರಣ ಇಂದು ಈಡೇರಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಮತ್ತು ವಾಲ್ಮೀಕಿ ಸಮಾಜದವರಿಗೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಶುಭ ಹಾರೈಸಿ, ವೃತ್ತಕ್ಕೆ ನಾಮಕರಣ ಮಾಡಿದರು.
ಪಟ್ಟಣದ ಬಾಗೇಪಲ್ಲಿ ವೃತ್ತಕ್ಕೆ ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡಲು ಕಳೆದ 2 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ನಗರಸಭಾ ಅಧಿಕಾರಿಗಳ ಜೊತೆ ಚರ್ಚಿಸಿ ವಾಲ್ಮೀಕಿ ಜಯಂತಿಯಂದೇ ಈ ವೃತ್ತಕ್ಕೆ ನಾಮಕರಣ ಮಾಡುತ್ತಿರುವುದು ನನ್ನ ಅದೃಷ್ಟವೆಂದು ಹೇಳಿದರು.
ಇಗೇ ವೇಳೆ ವಿವಿಧ ಸ್ತಬ್ದ ಚಿತ್ರಗಳು ಸಾರ್ವಜನಿಕರ ಗಮನ ಸೆಳೆದವು. ಪಟ್ಟಣದ ಪ್ರವಾಸಿ ಮಂದಿರದಿಂದ ವಿವಿಧ ಪ್ರಮುಖ ರಸ್ತೆಗಳಲ್ಲಿ ಅತಿ ವಿಜೃಂಭಣೆಯಿಂದ ವಿವಿಧ ಇಲಾಖೆಯಿಂದ ಹಾಗೂ ಸಂಘ ಸಂಸ್ಥೆಗಳಿಂದ ಆಯೋಜಿಸಲಾಗಿದ್ದ ಸ್ತಬ್ದ ಚಿತ್ರಗಳಾದ ವೀರಮದಕರಿ ನಾಯಕ, ಮಹರ್ಷಿ ವಾಲ್ಮೀಕಿ, ಬೇಡರ ಕಣ್ಣಪ್ಪ ಸಮಾಜದ ಇತಿಹಾಸ ಪುರುಷರಾದ ಮಾಜಿ ಮಂತ್ರಿಗಳಾದ ದೇವರಾಜ್ ಅರಸ್, ಎಲ್.ಜಿ.ಹಾವನೂರು ಅವರ ಸ್ತಬ್ದ ಚಿತ್ರಗಳು ನೋಡುಗರರ ಮನಸೆಳೆದವು.