'ವಾಲ್ಮೀಕಿಯ ತತ್ವಾದರ್ಶ ಪಾಲಿಸುವಲ್ಲಿ ಸಮುದಾಯದವರೇ ವಿಫಲ'
ಮಾಲೂರು: ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿಯ ತತ್ವಾದರ್ಶಗಳನ್ನು ಪಾಲಿಸುವಲ್ಲಿ ಸಮುದಾಯದವರೇ ವಿಫಲರಾಗುತ್ತಿರುವುದು ವಿಷಾಧನೀಯ ಎಂದು ತಹಸೀಲ್ದಾರ್ ಡಾ. ಸುಧಾ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ದೇಶ-ವಿದೇಶದವರು ಸಹ ರಾಮಾಯಣದಿಂದ ಪ್ರಭಾವಿತ ರಾಗಿದ್ದಾರೆ. ಆದರೆ ವಾಲ್ಮೀಕಿ ಸಮುದಾಯದವರೆ ವಾಲ್ಮೀಕಿಯ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿ ಅಭಿವೃದ್ಧಿಯಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದಾರ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಮಂಜುನಾಥ್ ಗೌಡ, ಪಟ್ಟಣದಲ್ಲಿ ವಾಲ್ಮೀಕಿ ಭವನಕ್ಕಾಗಿ ಒಂದು ಕೋಟಿ ರು.ಗಳು ಮಂಜೂರಾಗಿದ್ದು, ಭವನ ಉತ್ತಮ ಜಾಗದಲ್ಲಿ ನಿರ್ಮಿಸಲು ತಹಸೀಲ್ದಾರ್ ರವರಿಗೆ ತಿಳಿಸಲಾಗಿದೆ ಎಂದರು. ಭಿನ್ನಾಭಿಪ್ರಾಯ ಬದಿಗೊತ್ತಿ ಸಾಮುದಾಯದ ಮುಖಂಡರು ಸಂಘಟಿತರಾಗಿ ಜಯಂತಿ ಆಚರಿಸಬೇಕು ಎಂದರು. ಜಿಪಂ ಸದಸ್ಯ ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಟಿ. ಮುನಿಯಪ್ಪ, ನಾರಾಯಣಪ್ಪ, ನಂಜೇಗೌಡ, ಹನುಮಂತಪ್ಪ, ಗುಂಡಪ್ಪ ಮಾತನಾಡಿದರು. ಉಪಾನ್ಯಾಸಕ ರಾಮಕೃಷ್ಣಪ್ಪ ವಾಲ್ಮೀಕಿ ಮಹರ್ಷಿ ಜೀವನದ ಬಗ್ಗೆ ಉಪಾನ್ಯಾಸ ನೀಡಿದರು. ಜಿಪಂ ಸದಸ್ಯೆ ಯಶೋಧಮ್ಮ ಕೃಷ್ಣಮೂರ್ತಿ, ಎಇಇ ಬದ್ರಿನಾಥ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ, ಅಬ್ಬಯ್ಯಪ್ಪ, ಅಡಕೆ ನಂಜುಂಡಪ್ಪ, ಟಿ.ಕೆ. ನಾಗರಾಜ್, ಪುರಸಭೆ ಸದಸ್ಯೆ ಗೀತಾ ವೆಂಕಟೇಶ್, ನಾಗರಾಜ್,ಅಲೂಮಂಜು, ಮುರಳೀಧರ್, ಪಾಪಣ್ಣ ಇದ್ದರು.
ಅದ್ಧೂರಿ ಮೆರವಣಿಗೆ: ಸಮಾರಂಭಕ್ಕೂ ಮೊದಲು ಮಿನಿ ವಿಧಾನದ ಬಳಿ ಶಾಸಕ ಮಂಜುನಾಥ್ ಗೌಡ ವಾಲ್ಮೀಕಿ ಮಹರ್ಷಿಯ ಮೆರವಣಿಗೆಗೆ ಚಾಲನೆ ನೀಡಿದರು. ತಹಸೀಲ್ದಾರ್ ಡಾ. ಸುಧಾ, ಮುಖ್ಯಾಧಿಕಾರಿ ರೇಣುಕಾ ಮತ್ತಿತರರು ಇದ್ದರು.