ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುಗಮ ಸಂಚಾರಕ್ಕೆ ಅನುವು ಮಾಡಿದ ಪೊಲೀಸರು

Vishwanath S
Updated On : 19 Oct 2013, 12:24 pm

ಬಂಗಾರಪೇಟೆ: ಪಟ್ಟಣದ ಬಜಾರ್ ರಸ್ತೆಯನ್ನು ಏಕಮುಖಿ ರಸ್ತೆಯಾಗಿ ಮಾಡಿ ಹಲವು ವರ್ಷಗಳೇ ಕಳೆದರೂ ಸಂಚಾರ ನಿಯಮ ಪಾಲಿಸುತ್ತಿರಲಿಲ್ಲ ಇದರಿಂದ ಈ ರಸ್ತೆಯಲ್ಲಿ ಸಂಚಾರ ಹದಗೆಟ್ಟಿತ್ತು ಈಗ ಈ ರಸ್ತೆಯಲ್ಲಿ ಪೇದೆಯನ್ನು ನಿಯೋಜಿಸುವ ಮೂಲಕ ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
15 ವರ್ಷಗಳ ಹಿಂದೆ ಕೆಜಿಎಫ್ ರಕ್ಷಣಾಧಿಕಾರಿಯಾಗಿದ್ದ ಮಾಲಿನಿಕೃಷ್ಣಮೂರ್ತಿರವರು ಜನರಿಗೆ ಸುಗಮವಾಗಿ ಓಡಾಡಿ ವ್ಯಾಪಾರ ಮಾಡಲು ಕುವೆಂಪು ವೃತ್ತದಿಂದ ಪ್ರಾರಂಭವಾಗುವ ಬಜಾರ್ ರಸ್ತೆಯನ್ನು ಏಕಮುಖಿ ರಸ್ತೆಯಾಗಿ ಪರಿವರ್ತಿಸಿದ್ದರು. ಪ್ರಾರಂಭದಲ್ಲಿ ಕೆಲ ತಿಂಗಳು ಈ ರಸ್ತೆಯಲ್ಲಿ ಪೊಲೀಸರನ್ನು ಹಾಕಲಾಗಿತ್ತು.
ನಂತರ ಪೊಲೀಸರು ಮಾಯವಾದರು ಏಕಮುಖಿ ರಸ್ತೆ ಎರಡೂ ಕಡೆಯಿಂದ ವಾಹನಗಳು ಬರಲು ಪ್ರಾರಂಭಿಸಿ ಮತ್ತೆ ಕಿರಿಕಿರಿ ಉಂಟು ಮಾಡಿದರೂ ಪೊಲೀಸರು ತಲೆ ಕೆಡಿಸಿಕೊಂಡಿರಲಿಲ್ಲ. ಇತ್ತೀಚಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಫುಟ್‌ಪಾತ್ ಆಕ್ರಮಿಸಿಕೊಂಡಿರುವ ಸಣ್ಣ ವ್ಯಾಪಾರಿಗಳನ್ನು ತೆರವು ಮಾಡಲು ಪುರಸಭೆ ಅಧಿಕಾರಿಗಳನ್ನು ಬಿಟ್ಟರು. ಇದರಿಂದ ಇಬ್ಬರ ನಡುವೆ ಮತ್ತೆ ಗೊಂದಲ ಮಾತಿನ ವಾಗ್ದಾಳಿ ನಡೆದು ತೆರವು ಕಾರ್ಯವನ್ನು ಮತ್ತೆ ಕೈಬಿಟ್ಟರು. ಈಗ ಹೊಸದಾಗಿ ವೃತ್ತ ನಿರೀಕ್ಷಕರಾಗಿ ಬಂದಿರುವ ವೆಂಕಟಾಚಲಪತಿರವರು ಸುಗಮ ಸಂಚಾರಕ್ಕೆ ಏಕಮುಖಿ ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಸೂಚಿಸಿರುವುದು ಕೊಂಚ ಮಟ್ಟಿಗೆ ಜನರಿಗೆ ನೆಮ್ಮದಿ ತಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement