'ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ'
ಮಾಲೂರು: ಬಿಜೆಪಿ ಸರ್ಕಾರ ಮಂಜೂರು ಮಾಡಿದ ಯೋಜನೆಗಳನ್ನು ಅನುಷ್ಠಾನಗೊಳಸುತ್ತಿರುವ ಕಾಂಗ್ರೆಸ್ ಸರ್ಕಾರ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವುದರಲ್ಲಿ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ಕಿ ಭಾಗ್ಯ, ಹಾಲು ಭಾಗ್ಯ ಎನ್ನುವ ಚೀಪ್ ಗಿಮೀಕ್ ಯೋಜನೆ ಅನುಷ್ಠಾನಗೊಳಿಸಿ ಜನಪರ ಕಾರ್ಯಕ್ರಮದಂತೆ ಬಿಂಬಿಸುತ್ತಿದೆ ಎಂದರು. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಹಲವು ತಿಂಗಳಾದರೂ ಹಿಂದುಳಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್ ವಿತರಿಸಲಿಲ್ಲ. ಹಾಸ್ಟೆಲ್‌ಗಳಲ್ಲಿ ಖಾಲಿ ಇರುವ ವಾರ್ಡ್‌ನ್‌ಗಳನ್ನು ತುಂಬುವ ಪ್ರಯತ್ನ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದುವರೆಗೆ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ ಒಂದು ಮನೆ ಕಟ್ಟಿ ನೀಡಲು ಸಾಧ್ಯವಾಗಿರುವುದುನ್ನು ಗಮನಿಸಿದರೆ ಇಂದಿನ ಆಡಳಿತ ಅಬ್ಬರದ ಪ್ರಚಾರದ ನಡುವೆಯ ವಾಸ್ತವವಾಗಿ ಹೇಗಿದೆ ಎಂದು ತಿಳಿದು ಬರುತ್ತಿದೆ ಎಂದರು. ಪರಮಶಿವಯ್ಯ ವರದಿಯ ಒಂದು ಭಾಗವಾಗಿ ಎತ್ತಿನಹೊಳೆ ಯೋಜನೆಗೆ ನಮ್ಮ ಸರ್ಕಾರ ಒಪ್ಪಿಗೆ ಸೂಚಿಸಿ ಹಂತಹಂತವಾಗಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಿದರೆ ಇಂದಿನ ಸರ್ಕಾರ ಬಜೆಟ್‌ನಲ್ಲಿ ಸಾವಿರ ಕೋಟಿ.ರು. ಮೀಸಲಿಟ್ಟು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮೂಲಕ ಅಡ್ಡಿ ಪಡಿಸುವ ಹೇಳಿಕೆ ನೀಡಿಸಿ ಯೋಜನೆ ಅನುಷ್ಠಾನಗೊಳ್ಳದಂತೆ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ನ.17 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೋದಿ ಕಾರ್ಯಕ್ರಮಕ್ಕೆ ಮಾಲೂರು ತಾಲೂಕಿನಿಂದ 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲು ನಾನು ಅಕಾಂಕ್ಷಿಯಾಗಿದ್ದರೂ ಪಕ್ಷವು ಯಾರಿಗೆ ಟಿಕೆಟ್ ನೀಡಿದರೂ ಅವರಿಗಾಗಿ ದುಡಿಯುವುದಾಗಿ ತಿಳಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೃಷ್ಣಾರೆಡ್ಡಿ, ಸುಬ್ರಮಣ್ಯ ರೆಡ್ಡಿ, ವೆಂಕಟೇಶ್‌ಗೌಡ, ರಾಜರಾಂ, ಕೆಂ. ನಾರಾಯಣಪ್ಪ, ಬಿ.ಆರ್. ವೆಂಕಟೇಶ್, ಗೋಪಾಲಕೃಷ್ಣ, ಬಾಬು, ಮಾರ್ಕೆಟ್ ಕೆಂಪಣ್ಣ, ಆಂಜಿ, ಗೋವಿಂದಸ್ವಾಮಿ ಇದ್ದರು.