ಕಾಲುಬಾಯಿ ಜ್ವರದ ಲಸಿಕೆ ಕೊರತೆ ಇಲ್ಲ: ಗುಡಿಯಪ್ಪ
ಶಿಡ್ಲಘಟ್ಟ: ಕಾಲುಬಾಯಿ ಜ್ವರದ ಲಸಿಕೆಗಳು ಸಾಕಷ್ಟಿದ್ದು ರಾಸುಗಳಿಗೆ ಉಚಿತವಾಗಿ ಕೊಡಲಾಗುವುದೆಂದು ನಂದಿನಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗುಡಿಯಪ್ಪ ತಿಳಿಸಿದರು.
ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ನಂದಿನಿ ಹಾಲು ಉತ್ಪಾದಕರ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷ-ಕಾರ್ಯದರ್ಶಿಗಳ ಸಭೆಯಲ್ಲಿ, ಕಾಲು ಬಾಯಿ ಜ್ವರದ ನಿಯಂತ್ರಣ, ಸತ್ತ ರಾಸುಗಳ ಪರಿಹಾರ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ರೋಗ ನಿಯಂತ್ರಣಕ್ಕೆ ನಂದಿನಿ ಹಾಲು ಒಕ್ಕೂಟ ಸಾಕಷ್ಟು ಲಸಿಕೆ ಖರೀದಿಸಿದ್ದು, ಲಸಿಕೆ ಕೊರತೆ ಇಲ್ಲವೆಂದು, ತಾಲೂಕಿನಾದ್ಯಂತ ಪಶು ವೈದ್ಯರ ಕೊರತೆ ಇರುವುದರಿಂದ ಲಸಿಕೆಯನ್ನು ಸರಿಯಾಗಿ ಕೊಡಲು ಸಾದ್ಯವಾಗುತ್ತಿಲ್ಲವೆಂದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೋಲಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಕೆ.ಜೊ. ಈಶ್ವರಯ್ಯ, ಚಂದ್ರಪ್ಪ ರೆಡ್ಡಿ. ನಿರ್ದೇಶಕ ಬಸವರಾಜು, ಗೋಪಾಲರೆಡ್ಡಿ, ವೆಂಕಟೇಶ್, ಗೋವಿಂದರಾಜು, ನಾಗರತ್ನಮ್ಮ, ರತ್ನಮ್ಮ, ಚಂದ್ರೇಗೌಡ ಇದ್ದರು.