ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೆಂಪೋಪಲ್ಟಿ; ಚಾಲಕನಿಗೆ ಗಾಯ

Rashmi Kasaragodu
Updated On : 29 Oct 2013, 12:22 pm

ಶಿಡ್ಲಘಟ್ಟ: ಎಚ್.ಕ್ರಾಸ್‌ನ ಸೃಷ್ಟಿ ಆಸ್ಪತ್ರೆ ಬಳಿ ಟೆಂಪೋ ಆಯತಪ್ಪಿ ಪಲ್ಟಿ ಹೊಡೆದ ಪರಿಣಾಮ ಚಾಲಕನಿಗೆ ಗಂಬೀರ ಗಾಯಗಳಾಗಿರುವ ಘಟನೆ ನಡೆದಿದೆ.
ನಂದಿಕ್ರಾಸ್‌ನಿಂದ ಚೆನೈಗೆ ತರಕಾರಿ ಹಾಕಿಕೊಂಡು ಹೋಗುತ್ತಿದ್ದಾಗ ಎದುರು ಬಂದ ಬೈಕನ್ನು ತಪ್ಪಿಸಲು ಹೋಗಿ ರಸ್ತೆ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೊ ಚಾಲಕ ರಮೇಶ್(35)ಗೆ ಗಂಭೀರ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣವನ್ನು ಗ್ರಾಮಾಂತರ ಠಾಣೆಯಲ್ಲಿ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.


ಈಜಲು ಹೋಗಿ ವಿದ್ಯಾರ್ಥಿ ಸಾವು
ಟೇಕಲ್: ಸಮೀಪದ ಈಶ್ವರನ ಕೆರೆಯಲ್ಲಿ ಬೆಂಗಳೂರಿನ ಹಲಸೂರು ಬಳಿಯ ಆರ್‌ಬಿಎಎನ್‌ಎಂಎಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಅಜಿತ್ (14) ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
  ಬೆಂಗಳೂರಿನ ಹಲಸೂರಿನ ಎಂ.ವಿ. ಗಾರ್ಡನ್ ನಿವಾಸಿಯಾದ ಸೆಲ್ವರಾಜ್ ಎಂಬವರ ಮಗನಾದ ಅಜಿತ್ ಗೆಳೆಯರೊಂದಿಗೆ ಈಜಲು ಹೋಗಿದ್ದಾಗ ಘಟನೆ ನಡೆದಿದೆ. ಮಾಸ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement