ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪತ್ನಿ ಕೊಲೆ, ಪತಿ ವಿರುದ್ಧ ದೂರು

Rashmi Kasaragodu
Updated On : 29 Oct 2013, 12:22 pm

ಕೋಲಾರ: ಪತ್ನಿಯನ್ನು ಆಟೋದಲ್ಲಿ ಕರೆದೊಯ್ದು ಅಪಘಾತವುಂಟು ಮಾಡಿ ಕೊಲೆಗೈದಿರುವ ಬಗ್ಗೆ ಮೃತಳ ಸಂಬಂಧಿಕರು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ದೊಡ್ನಹಳ್ಳಿ ಗ್ರಾಮದ ಚೈತ್ರಾ(20) ಕೊಲೆಯಾಗಿರುವ ದುರ್ದೈವಿಯಾಗಿದ್ದು, ಆಕೆಯ ಗಂಡ ಕೃಷ್ಣಮೂರ್ತಿಯೇ ಆಕೆಯನ್ನು ಕೊಂದು ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಸುಳ್ಳು ಹೇಳುತ್ತಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಚೈತ್ರಾ ಮತ್ತು ಕೃಷ್ಣಮೂರ್ತಿ ನಡುವೆ ದಿನವೂ ಗಲಾಟೆ ನಡೆಯುತ್ತಿತ್ತು. ಸಂಸಾರದಲ್ಲಿ ಹೊಂದಾಣಿಕೆ ಇರಲಿಲ್ಲವೆಂದು ದೂರಿದ್ದಾರೆ. ಕಳೆದ ರಾತ್ರಿ ಪತ್ನಿಯನ್ನು ಆಟೋದಲ್ಲಿ ಕರೆದೊಯ್ದ ಅಪಘಾತ ಮಾಡಿಸಿ ಕೊಲೆ ಮಾಡಿರುವ ಕೃಷ್ಣಮೂರ್ತಿ ನಂತರ ತಾನು ಗಾಯಗೊಂಡಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಜ್ಜಪ್ಪನಹಳ್ಳಿ ಸಮೀಪ ಅಪಘಾತ ಸಂಭವಿಸಿ ಆಟೋ ಪಲ್ಟಿ ಹೊಡೆದ ಕಾರಣ ತನ್ನ ಪತ್ನಿ ಸಾವನ್ನಪ್ಪಿದ್ದು, ತಾನು ಗಾಯಗೊಂಡಿರುವುದಾಗಿ ಆಸ್ಪತ್ರೆ ಸೇರಿರುವ ಕೃಷ್ಣಮೂರ್ತಿ ಹೇಳಿಕೆ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮಾಂತರ ಪಿ.ಎಸ್.ಐ ದೇವೇಂದ್ರಪ್ಪ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement