ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಆಗಿಲ್ಲ'

Rashmi Kasaragodu
Updated On : 29 Oct 2013, 12:21 pm

ಕೆಜಿಎಫ್: ಕೆಜಿಎಫ್‌ನ ಕೇನಡೀಸ್ ಲೈನ್ ಪ್ರದೇಶದಲ್ಲಿ ವಾಸಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕುಟುಂಬಗಳ ಅಭಿವೃದ್ಧಿಗೆ ಮತ್ತು ಅವರ ಜೀವನದ ಪರ್ಯಾಯ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ವೃದ್ಧಿ ಸಫಾಯಿ ಕರ್ಮಚಾರಿ ಆಯೋಗ ವಿಫಲವಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿಯ ಜಿಲ್ಲಾ ಸಂಚಾಲಕಿ ಎಂ. ಪದ್ಮಾ ಮಾತನಾಡಿದರು.
 ಅಕ್ಟೋಬರ್ 2011ರಲ್ಲಿ ಅಶೋಕ್‌ನಗರದ ಮನೆಯೊಂದರಲ್ಲಿ ಮಲದ ಗುಂಡಿಯನ್ನು ಸ್ವಚ್ಛ ಮಾಡುವಾಗ  ಕಾಲು ಜಾರಿ ಬಿದ್ದು ಸಾವನ್ನಪ್ಪಿದ ನಾಗೇಂದ್ರಬಾಬು, ರವಿ ಮತ್ತು ಪ್ರಸಾದ್(ಕುಟ್ಟಿ) ಅವರ 2ನೇ ವರ್ಷದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅದೇ ರೀತಿ ಸಫಾಯಿ ಕರ್ಮಚಾರಿ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಟ್ಟಿ ಸಲ್ಲಿಸಿ ಸುಮಾರು 2 ವರ್ಷಗಳು ಕಳೆಯುತ್ತಿದ್ದರೂ ಈವರೆಗೆ ಯಾವುದೇ ವೇತನ ನೀಡಿಲ್ಲ. ಈ ಬಗ್ಗೆ ಸರ್ಕಾರದ ವಿರುದ್ಧ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಹಲವಾರು ಹೋರಾಟಗಳು ಹಾಗೂ ಪ್ರತಿಭಟನೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಜಿಎಫ್ ನಗರಸಭೆ 2002ರಲ್ಲಿ ಸಫಾಯಿ ಕರ್ಮಚಾರಿಗಳಿಂದ ಸ್ವಚ್ಛತಾ ಕೆಲಸವನ್ನು ಮಾಡಿಸಿಕೊಂಡು 9 ತಿಂಗಳ ಬಾಕಿ ವೇತನವನ್ನು ಇನ್ನೂ ನೀಡದೆ ಇರುವುದು ಶೋಚನೀಯ ಸಂಗತಿ. ಅದೇ ರೀತಿ ಸಫಾಯಿ ಕರ್ಮಚಾರಿಗಳ ಕುಟುಂಬಗಳು ವಾಸಿಸಲು ಸ್ವಂತ ನೆಲೆಯಿಲ್ಲದೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪದ್ಮಾ ಅವರು  ಆರೋಪಿಸಿದರು.
ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ಸದಸ್ಯರಾದ ಮಣಿಮಾಲ, ಶಾಂತಿ, ಪ್ರಭು, ರಾಜೇಂದ್ರ, ಸುಬ್ರಮಣಿ, ವಿಜಯಲಕ್ಷ್ಮೀ, ನರಸಮ್ಮ, ಆರೋನ್ ಮತ್ತಿತರರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement