ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಭಿವೃದ್ಧಿಗೆ ಕೈ ಜೋಡಿಸಲು ಮನವಿ

Rashmi Kasaragodu
Updated On : 30 Oct 2013, 12:04 pm


ಶ್ರೀನಿವಾಸಪುರ: ಗಾಂಧಿಜೀರವರ ರಾಮರಾಜ್ಯದ ಕನಸು ನನಸು ಮಾಡಲು ಗ್ರಾಮಗಳಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.
ತಾಲೂಕಿನ ಆರಿಕುಂಟೆ ಪಂಚಾಯ್ತಿಯ ನೀಲಟೂರು ಗ್ರಾಮದಲ್ಲಿ ತಮ್ಮ ಅನುಧಾನದಲ್ಲಿ ನಿರ್ಮಿಸಿರುವ  ರು. 7 ಲಕ್ಷ ವೆಚ್ಚದ ಹೈಮಾಸ್ಕ್ ದೀಪ ಸೇರಿದಂತೆ ವಿವಿಧ  ಅಭಿವದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ  ಮಾತನಾಡಿ, ಸರ್ಕಾರ ಜಿಲ್ಲೆಯ ರೈತರಿಗೆ ಸಬ್ಸಿಡಿ ಯೋಜನೆಗಳನ್ನು ನೀಡುವ ಬದಲಿಗೆ ಶಾಶ್ವತ ನೀರವಾರಿ ಯೋಜನೆಗೆ ಒತ್ತು ನೀಡಬೇಕು, ಮಾವು ಸೇರಿದಂತೆ ಕೃಷಿ ಉತ್ಪನ್ನ ಬೆಲೆ ಕುಸಿತವಾದಾಗ ಕಾರ್ಖಾನೆಗಳನ್ನು ಸ್ಥಾಪಿಸಿ ರೈತರ ನೆರವಿಗೆ ಮುಂದಾಗಬೇಕೆಂದು ಗ್ರಾಮಸ್ಥರು ವೈ.ಎ. ನಾರಾಯಣಸ್ವಾಮಿರವರಿಗೆ ಮನವಿ ಮಾಡಿದರು. ತಾಪಂ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ರಾಮಚಂದ್ರ, ಬೈರಾರೆಡ್ಡಿ, ರಾಘುವರೆಡ್ಡಿ, ಚಂದ್ರಶೇಖರ್, ದೇವರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement