ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಇಂದಿನ ಯುವಕರಲ್ಲಿ ಶಿಸ್ತು-ಸಂಯಮ ಅಗತ್ಯ'

Rashmi Kasaragodu
Updated On : 30 Oct 2013, 12:08 pm

ಕ.ಪ್ರ.ವಾರ್ತೆ   ಮಾಲೂರು   ಆ.29
ಇಂದಿನ ಯುವಕರಲ್ಲಿ ಶಿಸ್ತು-ಸಂಯಮ ಹಾಗೂ ನೈತಿಕತೆ ಬೆಳೆಯುವ ಉದ್ದೇಶದಿಂದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಸ್ಟರ್ ಕ್ರೀಡೆ ಹಾಗೂ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಂ.ವಿ. ನಾಗರಾಜಯ್ಯ ಹೇಳಿದರು.
  ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಾಸ್ಟರ್ ಕ್ರೀಡೆ ಮತ್ತು ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆಯ ಅಂಗವಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತ ಯುವಕರಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸಾಮಾಜಿಕ ಕಳಕಳಿ ವುಂಟುಮಾಡುವ ದೃಷ್ಟಿಯಿಂದ ವೇದಿಕೆಯನ್ನು ಹುಟ್ಟುಹಾಕಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಾಸ್ಟರ್ ಕ್ರೀಡೆ ತಂಡ ಗೆ 5 ಸಾವಿರ ರು. ನಗದು ಹಾಗೂ ಟ್ರೋಫಿಯನ್ನು, ದ್ವೀತಿಯ ಸ್ಥಾನ ಗಳಿಸಿದ ಡೊದ್ದಶಿವಾರ ಎ ತಂಡಕ್ಕ 3 ಸಾವಿರ ರು. ಹಾಗೂ ಮೂರನೇ ಸ್ಥಾನ ಪಡೆದ ಲಕ್ಕೂರು ತಂಡಕ್ಕೆ 2 ಸಾವಿರ ರು. ನಗದು ನೀಡಿ ಗೌರವ ಸಲ್ಲಿಸಲಾಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ರಾಮಕೃಷ್ಣ, ಸಂಘದ ಉಪಾಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಮಂಜುನಾಥ್, ಮಹಬೂಬ್ ಸಾಬ್, ಆರ್. ವೆಂಕಟೇಶ್, ನಿವೃತ್ತ ಅರಣ್ಯಾಧಿಕಾರಿ ಆಂಜಿನಪ್ಪ, ಖ್ಯಾತ ಉದ್ಯಮಿಗಳಾದ ಗೋಪಿನಾಥ್, ಜೈಪಾಲ್ ಇದ್ದರು.ಉಪಾನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement