ತಂಬಾಕು ನಿಷೇಧಕ್ಕೆ ಒತ್ತಾಯ
ಕೋಲಾರ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಜನಾರೋಗ್ಯವೇ ರಾಷ್ಟ್ರಶಕ್ತಿ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಯೋಗ ಶಿಬಿರವನ್ನು ನಗರದ ಶಹೀದ್ನಗರದಲ್ಲಿ ನಡೆಸಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಮೊಹಮದ್ ಇಮ್ರಾನ್ ಮಾತನಾಡಿ, ಗುಟ್ಕಾ ಮತ್ತು ತಂಬಾಕು ಮುಂತಾದವುಗಳಿಂದ ಆರೋಗ್ಯಕ್ಕೆ ಹಾನಿಕಾರವಾಗಿದ್ದು ಇವುಗಳ ಮಾರಾಟ ಸರ್ಕಾರ ನಿಷೇಧಿಸಿದ್ದರೂ ಕೆಲವು ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು ಜನರೇ ಇವಗಳನ್ನು ನಿಷೇಧಿಸುವಂತಾಗಬೇಕೆಂದು ತಿಳಿಸಿದರು. ಯುವ ಜನಾಂಗ ಆರೋಗ್ಯವಾಗಿದ್ದರೆ ಭಾರತ ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು.ತಾಜ್ಜು, ಶಾಮೀರ್, ಜುಬೇರ್, ನವಾಜ್, ಕಲೀಂ ಹಾಗೂ ಕಾರ್ಯಕರ್ತರು ಇದ್ದರು.