ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಫಿಡವಿಟ್ ರದ್ದು; ಸಾರ್ವಜನಿಕರ ಸ್ವಾಗತ

Rashmi Kasaragodu
Updated On : 31 Oct 2013, 12:40 pm

ಶಿಡ್ಲಘಟ್ಟ: ಕಂದಾಯ ಇಲಾಖೆಯಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಸಾಮಾಜಿಕ ಭದ್ರತಾ ಯೋಜನೆಯ ವಿವಿಧ ಪಿಂಚಣಿಗಳು ಸೇರಿದಂತೆ ವಿವಿಧ ಸೇವಾ ಸೌಲಭ್ಯ ಪಡೆಯಲು ಇನ್ನು ಮುಂದೆ ಪ್ರಮಾಣಪತ್ರ(ಅಫಿಡವಿಟ್) ಸಲ್ಲಿಸುವ ಅಗತ್ಯವಿಲ್ಲವೆಂದು ಆದೇಶ ಹೊರಡಿಸಿ ಬಡವರಿಗೆ ಅನುಕೂಲ ಕಲ್ಪಿಸಿದೆ.
ಈ ಸಂಬಂಧ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ 20.09.2013 ರಂದು ಕಂಇ, ಎಜೆಎಸ್ಕೆ, ಆಡಳಿತ, 75, 2012-13 ಆದೇಶ ಹೊರಡಿಸಿದ್ದಾರೆ. ಇದರಿಂದ ಬಡವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಮಾಡುತ್ತಿದ್ದ ನೂರಾರು ರು.ಗಳನ್ನು ಉಳಿಸಿದಂತಾಗಿದೆ. ಜನನ ಮತ್ತು ಮರಣ ದೃಢೀಕರಣ ಪತ್ರಗಳು ಹಾಗೂ ರೈತರ ದಿನನಿತ್ಯದ ಬದುಕಿಗೆ ಅವಶ್ಯವಾಗಿರುವ ದೃಢೀಕರಣ ಪತ್ರಗಳನ್ನು ಪಡೆಯಲು ಕಡ್ಡಾಯವಾಗಿ ಸಲ್ಲಿಸಬೇಕಿದ್ದ ನೋಟರಿ ದೃಢೀಕರಣ ಪತ್ರ ಮಾಡಿಸಲು ಪರದಾಡುತ್ತಿದ್ದ ನಾಗರಿಕರ ದೂರು ಅವಲೋಕಿಸಿದ ಸರ್ಕಾರ ನಾಗರಿಕರ ಮನವಿಗೆ ಸ್ಪಂದಿಸಿದೆ ಎಂದು ನಾಗರಿಕರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಇದಕ್ಕೆ ಪರ್ಯಾಯವಾಗಿ ಅರ್ಜಿದಾರರಿಂದ ಸ್ವಯಂ ದೃಢೀಕರಣ ಪಡೆದು ಸತ್ಯಾಸತ್ಯತೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಖಚಿತಪಡಿಸಿಕೊಂಡು ಸಾರ್ವಜನಿಕರಿಗೆ ಸೇವೆ ಒದಗಿಸಲು ಸರ್ಕಾರ ಆದೇಶಿಸಿದೆ ಎಂದು ತಹಸೀಲ್ದಾರ್ ಗ್ರೇಡ್-2 ರಮೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement