ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಯ್ಕೆ ಗೊಂದಲ; ಪುರಸ್ಕಾರ ರದ್ದು

Rashmi Kasaragodu
Updated On : 31 Oct 2013, 12:36 pm

ಶ್ರೀನಿವಾಸಪುರ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲು ಅರ್ಹ  ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದ ಕಾರಣ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಪುರಸ್ಕಾರಗಳನ್ನು ಈ ಬಾರಿ ರದ್ದುಗೊಳಿಸಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕೆಂದು ಸಮಿತಿ ಕಳೆದ 22 ರಂದು ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 5 ಮಂದಿಯನ್ನು ಗುರ್ತಿಸಿ ಅವರಿಗೆ ರಾಜ್ಯೋತ್ಸವ ದಿನ ಗೌರವಿಸುವುದಾಗಿ ಹೇಳಿತ್ತು. ಆಯ್ಕೆ ಸಮಿತಿಯ ಹಳೆಯ ಸದಸ್ಯರನ್ನು ಕಡೆಗಣಿಸಿ ಹೊಸಬರೆ ಅವರವರ ಜಾತಿಯವರ ಹೆಸರನ್ನು ಸೂಚಿಸಿದಾಗ ಹೊಸಬರು ಒಬ್ಬ ಬಿಟ್ಟು ಎಲ್ಲರೂ ಗೈರು ಹಾಜರಾಗಿ ಸಮಿತಿಗೆ ಆಗೌರವ ತರುವ ರೀತಿಯಲ್ಲಿ ನಡೆದುಕೊಂಡು ಸಭೆ ಗೊಂದಲಗಳ ಗೂಡಾಗಿದ್ದಕ್ಕೆ ತಹಸೀಲ್ದಾರರು ಏಕ ನಿರ್ಣಯ ತೆಗೆದುಕೊಂಡು ಈ ಬಾರಿ ಯಾರಿಗೂ ಸನ್ಮಾನ ಮಾಡುವುದು ಬೇಡ ಎಂದು ತಿಳಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement