ಆರ್ಥಿಕ ಗಣತಿ ನಿಖರವಾಗಿ ಮಾಡಲು ಕರೆ
ಮುಳಬಾಗಲು: ಆರ್ಥಿಕ ಗಣತಿ ಸರ್ಕಾರದ ಮಹತ್ವಕಾಂಕ್ಷಿಯ ಕಾರ್ಯಕ್ರಮವಾಗಿದೆ ಎಂದು ಕೋಲಾರ ಜಿಲ್ಲಾ ಸಂಖ್ಯಾಧಿಕಾರಿ ವಿ. ಶಂಕರನಾರಾಯಣ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಅರ್ಥಿಕ ಸಮೀಕ್ಷೆ ಕಾರ್ಯಾಗಾರದಲ್ಲಿ ಮಾತನಾಡಿ, ಕುರಿಸಾಕಾಣೆ, ಪಶುಪಾಲನೆ ಮುಂತಾದ ಆರ್ಥಿಕ ಚಟುವಟೆಕೆಗಳನ್ನು ಗಣತಿದಾರರು ಗಮನಿಸಬೇಕು ಎಂದರು. 538 ಗಣತಿದಾರರಿದ್ದು ಗ್ರಾಮೀಣ ಪ್ರಾಂತ್ಯದಲ್ಲಿ 179 ಬ್ಲಾಕ್ಗಳು, ಪಟ್ಟಣ ಪ್ರದೇಶದಲ್ಲಿ 69 ಬ್ಲಾಕ್ಗಳಿದ್ದು 105 ಮಂದಿ ಮೇಲ್ವಿಚಾರಕರು ಕಾರ್ಯನಿರ್ವಹಿಸುವರು. ನವೆಂಬರ್ 1ರಿಂದ ಪ್ರಾರಂಬಿಸಿ 25ರೊಳಗೆ ಗಣತಿ ಮುಗಿಸಬೇಕು ಎಂದರು. ಕೋಲಾರ ಸಂಖ್ಯಾ ಇಲಾಖೆಯ ಎಂ.ಜಿ. ಹುಸೇನ್ ಶ್ರೀಪಾದರಾವ್, ಶ್ರೀನಿವಾಸ್, ಸುರೇಶ್ ಭಾಗವಹಿಸಿದ್ದರು.