ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ
ಟೇಕಲ್: ಮಾಲೂರು ತಾಲೂಕಿನ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಶಾಸಕ ಕೆ.ಎಸ್. ಮಂಜುನಾಥಗೌಡ ತಿಳಿಸಿದರು.
ಬಂಡೂರು ಅಗ್ರಹಾರದಿಂದ ವೀರಕಪುತ್ರದ ರಸ್ತೆ ಹಿಂದೆ ಲೋಕೋಪಯೋಗಿ ಇಲಾಖೆ ಮತ್ತು ಭೂಸಾರಿಗೆ ನಿಗಮದಡಿ ನಬಾರ್ಡ್ ನೆರವಿನಿಂದ ರು. 50 ಲಕ್ಷ ಅಂದಾಜು ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನ ಪ್ರತಿ ಹಳ್ಳಿಯಲ್ಲೂ ರಸ್ತೆ ನಿರ್ಮಾಣ ಆಗಬೇಕಾಗಿದ್ದು ಮರಲಹಳ್ಳಿ, ಸೋಮಸಂದ್ರ, ಬನಹಳ್ಳಿಯಿಂದ ಯಲುವಹಳ್ಳಿ ಮಾರ್ಗದ ರಸ್ತೆಗಳಿಗೆ ಹೊಸ ಮೆರಗನ್ನು ನೀಡುವುದಾಗಿ ತಿಳಿಸಿದರು. ಕಾಮಗಾರಿಗಳು ನಡೆಯುತ್ತಿದ್ದಾಗ ಸಾರ್ವಜನಿಕರೆ ಲೋಪದೋಷಗಳನ್ನು ಗಮನಿಸಿ ತಮಗ ತಿಳಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕೆ.ವೈ. ನಂಜೇಗೌಡ, ತಾಪಂ ಸದಸ್ಯೆ ನಿರ್ಮಲ ಆಂಜಿನಪ್ಪ, ಟೇಕಲ್ ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಣ್ಣ, ಹನುಮಂತಪ್ಪ, ಕ್ಷೇತ್ರೇನಹಳ್ಳಿ ರಾಮಕೃಷ್ಣಪ್ಪ, ಮಿಟ್ಟಿಗಾನಹಳ್ಳಿ ರಾಮಕೃಷ್ಣಪ್ಪ, ಎಸ್.ಜಿ. ರಾಮಮೂರ್ತಿ, ಡಾ. ಪಿ. ನಾರಾಯಣಸ್ವಾಮಿ, ಟೇಕಲ್ ಆಂಜಿನಪ್ಪ, ಬಿ.ಜಿ. ಮುನಿಶಾಮಿಗೌಡ, ಮರಲಹಳ್ಳಿ ರಮೇಶ್, ಬಿ.ಜಿ. ಸತೀಶ್ ಇದ್ದರು.
ದೇವಾಲಯಕ್ಕೆ ಶಾಸಕರ ಭೇಟಿ: ಜಿಲ್ಲಾ ರೇಣುಕಾಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಬಂಡೂರು ಅಗ್ರಹಾರದ ಡಾ.ಪಿ. ನಾರಾಯಣಸ್ವಾಮಿ ನಿರ್ಮಾಣ ಮಾಡಿದ ಪ್ರಸಿದ್ಧ ರೇಣುಕಾಯಲ್ಲಮ್ಮದೇವಿ ದೇವಸ್ಥಾನಕ್ಕೆ ಶಾಸಕ ಕೆ.ಎಸ್. ಮಂಜುನಾಥಗೌಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಾರಾಯಣಸ್ವಾಮಿಯವರು ಶಾಸಕರಿಗೆ ಆದರದ ಸ್ವಾಗತ ಕೋರಿದರು. ಅರ್ಚಕ ಮಂಜುನಾಥರಿಂದ ಪೂಜೆ ಸಲ್ಲಿಸಲಾಯಿತು.