ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಟಿಪ್ಪು ಜಯಂತಿ ಸರ್ಕಾರವೇ ಆಚರಿಸಲಿ'

Rashmi Kasaragodu
Updated On : 31 Oct 2013, 12:41 pm

ಚಿಕ್ಕಬಳ್ಳಾಪುರ: ಮೈಸೂರಿನ ಹುಲಿ ಟಿಪ್ಪುಸುಲ್ತಾನರ ಜನ್ಮ ದಿನವನ್ನು ಸರ್ಕಾರವೇ ಆಚರಣೆ ಮಾಡುವುದರ ಜತೆಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ರಯಾನ್ ಫೌಂಡೇಷನ್ ಆಗ್ರಹಿಸಿದೆ.
ರಯಾನ್ ಫೌಂಡೇಷನ್ ಅಧ್ಯಕ್ಷ ಬಿ.ಎಸ್. ರಫಿವುಲ್ಲಾ ನೇತೃತ್ವದ ನಿಯೋಗ ಬುಧವಾರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ನಟೇಶ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ರಫಿವುಲ್ಲಾ, ಪ್ರತಿ ವರ್ಷ ನ.10 ರಂದು ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನರ ಜನ್ಮ ದಿನವನ್ನು ಕಡ್ಡಾಯವಾಗಿ ಅರ್ಥಪೂರ್ಣವಾಗಿ ಸರ್ಕಾರವೇ ಆಚರಣೆ ಮಾಡಬೇಕು. ಅಲ್ಲದೇ ಸರ್ಕಾರಿ ರಜೆಯನ್ನಾಗಿ ಘೋಷಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಮೈಸೂರಿನ ಹುಲಿ ಟಿಪ್ಪು ಸುಲ್ತಾನರ ಜನ್ಮ ಸ್ಥಳ ದೇವನಹಳ್ಳಿಯಲ್ಲಿ ಟಿಪ್ಪು ಸ್ಮರಣೆಗಾಗಿ ಒಂದು ಮಿಲಿಟರಿ ಶಾಲೆ ನಿರ್ಮಾಣ ಹಾಗೂ ರೇಷ್ಮೆ ಕೃಷಿ ಶಾಲಾ ಕಾಲೇಜನ್ನು ತೆರೆಯುವುದರೊಂದಿಗೆ ಅವರ ಜೀವನ ಸಾಧನೆಯನ್ನು ಬಿಂಬಿಸುವಂತೆ ದೇವನಹಳ್ಳಿಯಲ್ಲಿ ಒಂದು ಗ್ರಂಥಾಲಯ ಹಾಗೂ ವಸ್ತುಪ್ರದರ್ಶನ ಕೇಂದ್ರವನ್ನು ನಿರ್ಮಿಸಬೇಕು. ನಂದಿಬೆಟ್ಟದ ಮೇಲೆ ನಿರ್ಮಿಸಿರುವ ಬೇಸಿಗೆ ಅರಮನೆ ಹಾಗೂ ಕೋಟೆಗಳನ್ನು ದುರಸ್ತಿಗೊಳಿಸಿ ಸಂರಕ್ಷಿಸಬೇಕು. ದೇವನಹಳ್ಳಿ ನಗರದಲ್ಲಿನ ಟಿಪ್ಪು ಸುಲ್ತಾನರ ಕಾಲದ ಕೋಟೆ ಕೊತ್ತಲಗಳನ್ನು ಸಂರಕ್ಷಿಸಲು ಮುಂದಾಗುವುದಲ್ಲದೇ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಟಿಪ್ಪು ಸುಲ್ತಾನ್ ಅಧ್ಯಯನ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಟಿಪ್ಪು ಜನ್ಮ ಸ್ಥಳವಾದ ದೇವನಹಳ್ಳಿ ಇಲ್ಲವೇ ಚಿಕ್ಕಬಳ್ಳಾಪುರ ಅಥವಾ ರಾಜ್ಯದ ಯಾವುದೇ ಪ್ರದೇಶದಲ್ಲಾದರೂ ಟಿಪ್ಪು ಸುಲ್ತಾನ್ ಹೆಸರಲ್ಲಿ ವಿಶ್ವ ವಿದ್ಯಾಲಯ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಮದ್ ಸ್ವಾಮಾ, ಸರ್ದಾರ್ ಪಾಷ, ಸೈಯದ್ ಅಮಾನುಲ್ಲಾ, ಜಡ್. ಅಮೀರ್, ಮಹಮದ್ ಜ್ಯೂಯೇಬ್, ಮುಸ್ತಾಕ್ ಅಹಮದ್ ಸೇರಿದಂತೆ ಇನ್ನಿತರು ಹಾಜರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement