ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಲಿತರಿಂದ ಪಂಜಿನ ಮೆರವಣಿಗೆ

Rashmi Kasaragodu
Updated On : 31 Oct 2013, 12:40 pm

ಚಿಂತಾಮಣಿ: ವಿವಿಧ ಬೇಡಿಕೆ ಈಡೇರಿಸುವಲ್ಲಿ ತಾಲೂಕು ಆಡಳಿತ ವಿಫಲಗೊಂಡಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಳೆದ 6 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಅಂಗವಾಗಿ ಬುಧವಾರ ರಾತ್ರಿ ನೂರಾರು ದಲಿತರ ಪಂಜಿನ ಮೆರವಣಿಗೆಯನ್ನು ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆಸಿ ಪ್ರತಿಭಟಿಸಿದರು. ಜಿಲ್ಲಾ ಸಂಚಾಲಕ ಜಿ. ನಾರಾಯಣಸ್ವಾಮಿ ನೇತೃತ್ವದಲ್ಲಿ ಬುಧವಾರ ರಾತ್ರಿ ನೂರಾರು ದಲಿತರು ಪಂಜಿನ ಮೆರವಣಿಗೆ ನಡೆಸಿ ತಾಲೂಕು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದೋರಣೆ ವಿರುದ್ಧ ದಿಕ್ಕಾರ ಕೂಗಿದರು. ಬದರಿ, ಆ.ನ. ಪ್ರಸಾದ್, ಕರಿಪ್ಪಲ್ಲಿ ರಾಮನ್ನ, ವೈ. ರಾಮನ್ನ, ರಾಮಾಂಜಿ ಸೇರಿದಂತೆ ನೂರಾರು ದಲಿತರು ಭಾಗವಹಿಸಿದ್ದರು.
ಸಮೀಕ್ಷೆಗಾಗಿ ಸಭೆ
ಕೋಲಾರ: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗಾಗಿ ತಯಾರಿ ನಡೆಸಲು ಅ.31 ರಂದು ಮಧ್ಯಾಹ್ನ 4.30ಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪರಿಷ್ಕರಣೆ ಹೊಣೆ ಸ್ಥಾಯಿ ಸಮಿತಿಗೆ
ಮಂಡ್ಯ: ನಗರ ವ್ಯಾಪ್ತಿಯಲ್ಲಿ ಜಾಹಿರಾತು ಫಲಕ ಶುಲ್ಕ ಹಾಗೂ ಉದ್ದಿಮೆ ಪರವಾನಗಿ ದರಗಳ ಪರಿಷ್ಕರಣೆ ಹೊಣೆಯನ್ನು ಸ್ಥಾಯಿ ಸಮಿತಿಗೆ ವಹಿಸಲು ಬುಧವಾರದ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಾಹಿರಾತು ಫಲಕ, ಸಭೆ ಸಮಾರಂಭಗಳ ಕುರಿತ ಪ್ರಕಟಣೆಗಳು, ಫ್ಲಕ್ಸ್ಗಳು ಹಾಗೂ ಬ್ಯಾನರ್ಗಳನ್ನು ಅಳವಡಿಸಲು ನಿಗದಿ ಪಡಿಸಿರುವ ಶುಲ್ಕದ ದರವನ್ನು ಪರಿಷ್ಕರಿಸುವ ವಿಚಾರವನ್ನು ಸದಸ್ಯರು ಸ್ಥಾಯಿ ಸಮಿತಿಗೆ ವಹಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement