ಮುಂದೂಡಿದ ಉದ್ಯೋಗ ಮೇಳ
ಕೋಲಾರ: ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗಾವಕಾಶವನ್ನು ಒದಗಿಸುವ ಸಲುವಾಗಿ ಹಲವು ಖಾಸಗಿ ನಿಯೋಜಕರ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ ಹಾಗೂ ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕೆಗಳ ಇಲಾಖೆಯಿಂದ ಕೋಲಾರ ನಗರದಲ್ಲಿ ನ.9 ಮತ್ತು 10 ಎರಡು ದಿನ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಅನಿವಾರ್ಯ ಕಾರಣಗಳಿಂದ ನ.23 ಮತ್ತು 24ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದ್ದಾರೆ.