ಕ್ಷಯ ರೋಗಿಗಳಿಗೆ ಸಹಾಯ ಧನ ವಿತರಣೆ
ಮುಳಬಾಗಲು: ಮನುಷ್ಯನಿಗೆ ಆರೋಗ್ಯವೇ ಮಹಾ ಭಾಗ್ಯ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಯಾದವ ಕಲ್ಯಾಣ ಮಂಟಪದಲ್ಲಿ ಬುಧವಾರ 155 ಮಂದಿ ಕ್ಷಯರೋಗ ಪೀಡಿತರಿಗೆ ಸಹಾಯ ಧನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷಯ ರೋಗಿಗಳು ಹೆದರಬೇಕಾಗಿಲ್ಲ, ಕಾಲಕಾಲಕ್ಕೆ ಔಷಧ ಮತ್ತು ಉತ್ತಮ ಆಹಾರ ತೆಗೆದುಕೊಂಡರೇ ಸಂಪೂರ್ಣ ಗುಣಮುಖವಾಗುತ್ತದೆ ಎಂದರು. ಶಾಸಕರ ಈ ಕೆಲಸ ಇತರರಿಗೂ ಮಾದರಿಯಾಗಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸೂರ್ಯಕಾಂದತ್ ಹೇಳಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮನು, ಎನ್.ಆರ್. ನಾರಾಯಣಸ್ವಾಮಿ, ಬಿ.ಎಂ. ಮಧುಕೇಶ್, ಎನ್. ಮುರಳಿ, ರಾಮಕೃಷ್ಣಪ್ಪ, ತಾಲೂಕು ಭೂ ಬ್ಯಾಂಕ್ ಅಧಿಕಾರಿ ಎಂ.ಸಿ. ನೀಲಕಂಠೇಗೌಡ, ಪ್ರಭಾಕರ್, ಪುರಸಭೆ ಸದಸ್ಯ ಜಗಮೋಹನ್ರೆಡ್ಡಿ, ಮಲ್ಲಿಕಾರ್ಜುನರೆಡ್ಡಿ ಇದ್ದರು.