ಶಾಸಕರಿಂದ ಅರಿಶಿನ ಕುಂಕುಮ ಭಾಗ್ಯ
ಬಂಗಾರಪೇಟೆ: ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕ್ಷೇತ್ರದ ಮಹಿಳೆಯರಿಗಾಗಿ ತಮ್ಮ ಮನೆಯಲ್ಲಿ ಪ್ರತಿ ಶುಕ್ರವಾರ ಅರಿಶಿನ ಕುಂಕುಮ ಭಾಗ್ಯವನ್ನು ಕಲ್ಪಿಸುವ ಮೂಲಕ ಮಹಿಳಾ ಮತದಾರರ ರುಣ ತೀರಿಸುವುದಾಗಿ ಹೇಳಿದರು. ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶಾಸಕ ನಾರಾಯಣಸ್ವಾಮಿ ದಂಪತಿಗಳಿಗೆ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆ ಬಗ್ಗೆ ಮುಂದಿನ ಅದಿವೇಶನದಲ್ಲಿ ಸರ್ಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದರು.