ಉಬ್ಬೆ ಮಳೆ ಅಬ್ಬರ; ಟೇಕಲ್ ತತ್ತರ
ಟೇಕಲ್: ನಿರಂತರವಾಗಿ ಸುರಿಯುತ್ತಿರುವ ಉಬ್ಬೆ ಮಳೆಯಿಂದ ಭಾನುವಾರ ರಾತ್ರಿ ಹಾಗೂ ಸೋಮವಾರ ಸಂಜೆಯಿಂದ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳೆಲ್ಲಾ ನೀರು ನಿಂತು ವಾಹನ ಓಡಾಡಲು ಬಹುತೇಕ ತೊಂದರೆಯಾಗಿದೆ. ಅದರಲ್ಲೂ ಸ್ವಲ್ಪ ಮಳೆ ಬಂದರೆ ಸಾಕು ಟೇಕಲ್, ಕೆಂಪನಹಳ್ಳಿ ವಿದ್ಯುತ್ಚ್ಛಕ್ತಿ ಉಪಕೇಂದ್ರದಲ್ಲಿ ವಿದ್ಯುತ್ ನಿಲುಗಡೆಯಾಗುತ್ತದೆ. ಸ್ವಲ್ಪ ಗಾಳಿ ಮಳೆ ಇದ್ದರೂ ರೆಂಟೇ ಇಲ್ಲದಾಗುತ್ತದೆ.
ಈ ನಿಟ್ಟಿನಲ್ಲಿ ಭಾನುವಾರ ಸಂಜೆ ಹೋದ ವಿದ್ಯುತ್ ಸ್ವಲ್ಪಮಟ್ಟಿಗೆ ಸೋಮವಾರ ನೀಡಿದ್ದರೂ ಸಂಜೆ 4-00 ಗಂಟೆಗೆ ಹೋದ ವಿದ್ಯುತ್ಚ್ಛಕ್ತಿ ಇಲ್ಲವಾದರೂ ನೀಡಿಲ್ಲ, ಇದೀಗ ಕರ್ನಾಟಕ ವಿದ್ಯುತ್ಚ್ಛಕ್ತಿ ಮಂಡಳಿಯವರು ಬೆಸ್ಕಾಂ ಇಲಾಖೆಗೆ ಉತ್ತಮವಾದ ಉಪಕರಣಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಈ ಬಗ್ಗೆ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿದರೆ ಉಡಾಫೆ ಉತ್ತರಗಳನ್ನು ನೀಡುತ್ತಾರೆ. ವಿದ್ಯುತ್ ಮತ್ತು ದೂರಸಂಪರ್ಕ ಇಲಾಖೆ ನಿರ್ಲಕ್ಷ್ಯದಿಂದ ಜನತೆ ಬೇಸತ್ತು ಹೋಗಿದ್ದಾರೆ.
ನಿರಂತರ ಮಳೆಯಿಂದ ಟೇಕಲ್, ಹಳೇಪಾಳ್ಯ, ತೊರಲಕ್ಕಿ, ಹುಳದೇನಹಳ್ಳಿ, ಶ್ರೀಕಂಠಪುರ ಮುಂತಾದ ಕಡೆಗಳ ಸಣ್ಣಪುಟ್ಟ ಕೆರೆಗಳು ಅರ್ಧಂಬರ್ಧ ಭರ್ತಿಯಾಗುತ್ತಾ ಬಂದಿದ್ದು ಕಾಲುವೆಗಳಿಗೂ ನೀರು ತುಂಬುತ್ತಿದೆ. ಒಟ್ಟಾರೆ ಎರಡು ದಿನಗಳ ಮಳೆಯ ಆರ್ಭಟ ಮುಂದೆ ಬರುವ ಗಣೇಶನ ಹಬ್ಬಕ್ಕೆ ಮುನ್ಸೂಚನೆಯಂತಿದೆ.