ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ
ಬಂಗಾರಪೇಟೆ: ಎರಡು ವರ್ಷಗಳ ಹಿಂದೆ ಸ್ನೇಹಿತರು ಹೆಣ್ಣಿನ ವಿಷಯಕ್ಕೆ ಜಗಳವಾಡಿಕೊಂಡು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ತ್ವರಿತ ನ್ಯಾಯಾಲಯ ಅಪರಾಧಿ ಕಾರ್ಪೆಂಟರ್ ಬಾಬು ಎಂಬಾತನಿಗೆ ಜೀವಾವಧಿ ಶಿಕ್ಷೆ ನೀಡಿ ಮತ್ತೊಬ್ಬ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
2011ರಲ್ಲಿ ಪಟ್ಟಣದ ಬೋವಿನಗರದ ಯುವಕರಾದ ಆಟೋ ಚಾಲಕ ವೆಂಕಟೇಶ್, ಕಾರ್ಪೆಂಟರ್ ಬಾಬು ಹಾಗೂ ಮಹೇಂದ್ರ ಎಂಬುವರು ಕಂಠ ಪೂರ್ತಿ ಕುಡಿದು ಹೆಣ್ಣಿನ ವಿಷಯಕ್ಕೆ ಮೂವರು ಜಗಳವಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಆಟೋಚಾಲಕ ವೆಂಕಟೇಶ್ನನ್ನು ಕಾಪೆಂರ್ಟರ್ ಬಾಬು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದ ಇವನಿಗೆ ಸಹಕರಿಸಿದ್ದ ಮಹೇಂದ್ರ ಇಬ್ಬರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಸುದೀರ್ಘವಾಗಿ ವಿಚಾರಣೆ ನಡೆಸಿದ ಕೆಜಿಎಫ್ ತ್ವರಿತ ನ್ಯಾಯಾಲಯ ಸೋಮವಾರ ಆರೋಪಿ ಬಾಬುವಿಗೆ ಜೀವಾವದಿ ಶಿಕ್ಷೆ ನೀಡಿದ್ದರೆ, ಮತ್ತೊಬ್ಬ ಆರೋಪಿ ಮಹೇಂದ್ರ ವಿರುದ್ಧ ಸೂಕ್ತ ಸಾಕ್ಷ್ಯಧಾರ ಇಲ್ಲದ ಕಾರಣ ಖುಲಾಸೆಗೊಳಿಸಿದೆ.
ಮನೆ ಬೀಗ ಮುರಿದು ಕಳವು
ಬಂಗಾರಪೇಟೆ: ಪಟ್ಟಣದ ವಿಜಯನಗರದಲ್ಲಿ ಕಳೆದ ಎರಡು ತಿಂಗಳಿಂದ ಮನೆಗೆ ಬೀಗ ಹಾಕಿಕೊಂಡು ಹೈದರಾಬಾದ್ ನಲ್ಲಿರುವ ಮಗನ ಮನೆಗೆ ಹೋಗಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿಸಿ ಲಕ್ಷಾಂತರ ರುಪಾಯಿ ನಗದು ಸೇರಿದಂತೆ ಚಿನ್ನಾಭರಣ ದೋಚಿಕೊಂಡು ಹೋಗಿರುವ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ. ವಿಜಯನಗರದ ನಿವಾಸಿ ಅನ್ನಪೂರ್ಣ ಎಂಬುವರು ಹೈದರಾಬಾದ್ನಲ್ಲಿರುವ ತನ್ನ ಮಗನನ್ನು ನೋಡಿ ಬರಲು ಎರಡು ತಿಂಗಳ ಹಿಂದೆ ಹೋಗಿದ್ದರು. ಈ ವೇಳೆ ಕಳ್ಳರು ಮನೆ ಬಾಗಿಲನ್ನು ಮುರಿದು ಒಳ ನುಗ್ಗಿ ಬೀರುವುನಲ್ಲಿದ್ದ ಹಣ ಒಡವೆ, ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.
ಸೋಮವಾರ ಪಕ್ಕದ ಮನೆಯವರು ಬಾಗಿಲು ತೆರೆದಿರುವುದನ್ನು ಕಂಡು ನೋಡಿದಾಗ ಪ್ರಕರಣ ಬಯಲಾಯಿತು. ಮನೆ ಮಾಲೀಕರು ಹೈದರಾಬಾದ್ ನನಲ್ಲಿರುವುದರಿಂದ ಅವರು ಬಂದ ಬಳಿಕವಷ್ಟು ಎಷ್ಟು ಪ್ರಮಾಣದಲ್ಲಿ ಕಳುವಾಗಿದೆ ಎಂದು ಹೇಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.