ಕೋಲಾರಕ್ಕೆ ವರುಣನ ಕೃಪೆ
ಕೋಲಾರ: ಮುಂಗಾರು ಕೈಕೊಟ್ಟಿದ್ದರಿಂದ ಕಂಗೆಟ್ಟಿದ್ದ ರೈತರಿಗೆ ವರುಣ ಕೃಪೆ ತೋರಿದ್ದಾನೆ. ಸೋಮವಾರ ರಾತ್ರಿ 8ಗಂಟೆಗೆ ಪ್ರಾರಂಭವಾದ ಜೋರು ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಭಾನುವಾರ ರಾತ್ರಿಯೂ ಅಲ್ಲಲ್ಲಿ ಮಳೆಯಾಗಿದ್ದರೂ ಕೆರೆ-ಕುಂಟೆಗಳು ತುಂಬುವಷ್ಟು ಮಳೆಯಾಗಿಲ್ಲ. ಇನ್ನೆರಡು ಮೂರು ದಿನ ಇದೇ ರೀತಿ ಜೋರು ಮಳೆಯಾದಲ್ಲಿ ಅಂತರ್ಜಲ ತಕ್ಕಮಟ್ಟಿಗೆ ಸುಧಾರಣೆ ಕಾಣಬಹುದು, ಜಾನುವಾರುಗಳಿಗೆ ಮೇವು ಬೆಳೆಯುವುದಕ್ಕೆ ಈ ಮಳೆಯಿಂದ ಅನುಕೂಲವಾಗಲಿದೆ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ. ಬಿತ್ತನೆ ಕಾರ್ಯ ಆಗಿರುವ ಪ್ರದೇಶಗಳಲ್ಲಿ ಈ ಮಳೆ ರೈತರಿಗೆ ವರದಾನವಾಗಲಿದೆ. ಆದರೆ, ತೋಟಗಾರಿಕೆ ಬೆಳೆಗಳಾದ ಟೋಮೇಟೋಗೆ ಹಾನಿ ಆಗುವ ಸಾಧ್ಯತೆಗಳಿವೆ.