ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾಯಕರ ಕೇಂದ್ರದ ಮೀಸಲಾತಿ ರಾಜ್ಯಕ್ಕೂ ಅನ್ವಯಿಸಲಿ'

Rashmi Kasaragodu
Updated On : 3 Sept 2013, 12:58 pm

ಮಾಲೂರು: ನಾಯಕ ಜನಾಂಗಕ್ಕೆ ಕೇಂದ್ರ ಸರ್ಕಾರವು ನೀಡಿರುವ ಶೇ.7.5ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರವೂ ಕಲ್ಪಿಸಬೇಕು ಎಂದು ವಾಲ್ಮೀಕಿ ನಾಯಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ವೆಂಕಟರಾಮ್ ಒತ್ತಾಯಿಸಿದರು.
ಶ್ರೀ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಪಟ್ಟಣದ ಪದ್ಮಾವತಿ ಸಂಕೀರ್ಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, 1951ರಲ್ಲಿ ಸರ್ಕಾರ ಅತಿ ಕಡಿಮೆ ಹಾಗೂ ಹಿಂದುಳಿಂದಿದ್ದ ನಾಯಕ ಜನಾಂಗಕ್ಕೆ ಶೇ.3ರಷ್ಟು ಮೀಸಲಾತಿ ಕಲ್ಪಿಸಿತ್ತು. ಆದರೆ ಈಗ ರಾಜ್ಯದಲ್ಲಿ 70 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಹವಣಿಸುತ್ತಿರುವ ನಾಯಕ ಜನಾಂಗಕ್ಕೆ ಮೀಸಲಾತಿ ಅದೇ ಪ್ರಮಾಣದಲ್ಲಿ ಮುಂದುವರೆದಿದೆ. ಈ ತಾರತಮ್ಯ ನೀಗಿಸಬೇಕೆಂದು ಒತ್ತಾಯಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. ವಾಲ್ಮೀಕಿ ಜನಾಂಗದ ಹಿರಿಯ ಮುಖಂಡ ನರಸಿಂಹಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪ, ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುನಿನಾರಾಯಣಪ್ಪ, ಕಾರ್ಯದರ್ಶಿ ಎ.ಕೆ. ವೆಂಕಟೇಶ್ ಮಾತನಾಡಿದರು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಶಿಕ್ಷಕ ಗುಂಡಪ್ಪ, ಸಂಘದ ನಿರ್ದೇಶಕ ಪಿಳ್ಳಪ್ಪ, ಪುರಸಭೆ ಸದಸ್ಯೆ ಗೀತಾ ವೆಂಕಟೇಶ್, ನಾಯಕ ಜನಾಂಗ ಸಂಘದ ಅಧ್ಯಕ್ಷ ಅಬ್ಬಯ್ಯಪ್ಪ, ದೇವಾನಂದ ನಾಯಕ್, ವೆಂಕಟರಾಮ್, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement