ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಲೂನ್, ಚಾಕಲೇಟ್ ಪುಟಾಣಿಗಳು

Rashmi Kasaragodu
Updated On : 3 Sept 2013, 12:55 pm

ಚಿಂತಾಮಣಿ: ಪಟ್ಟಣದ ರಾಯಲ್ ವಿದ್ಯಾಶಾಲೆಯಲ್ಲಿ ಶನಿವಾರದಂದು ಬಲೂನ್ ಮತ್ತು ಚಾಕಲೇಟ್ ಡೇ ಕಾರ್ಯಕ್ರಮಕ್ಕೆ ನಗರಠಾಣೆಯ ವೃತ್ತ ನಿರೀಕ್ಷಕ ನಂಜಪ್ಪ ಚಾಲನೆ ನೀಡಿದರು. ಮಕ್ಕಳಲ್ಲಿ ಭಿನ್ನಾಭಿಪ್ರಾಯಗಳಿಲ್ಲದೆ ಎಲ್ಲರೂ ಒಂದೇ ಎನ್ನುವ ಒಳ್ಳೆಯ ಕಾರ್ಯಕ್ರಮ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಯಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ರಾಮಕೃಷ್ಣ ಮಾತನಾಡುತ್ತಾ ಮಕ್ಕಳಲ್ಲಿ ಮಾನಸಿಕವಾಗಿ, ದೈಹಿಕವಾಗಿ ಅಭಿವೃದ್ಧಿ ಹೊಂದಲು ಇಂತಹ ಕಾರ್ಯಕ್ರಮಗಳು ಬಹಳ ಅಗತ್ಯವೆಂದು ಹೇಳಿದರು. ಎಸ್ಸೈ ಅನಿಲ್ಕುಮಾರ್ ಮತ್ತು ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಪ್ರೇಮಲತಾ ಹಾಗೂ ಉಪನ್ಯಾಸಕರಾದ ನಾಗಾರ್ಜುನರೆಡ್ಡಿ, ಶಿ.ಮು.ಮಂಜುನಾಥ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement