ಸುವರ್ಣ ಗ್ರಾಮ ಯೋಜನೆಗೆ ಚಾಲನೆ
ಕ.ಪ್ರ.ವಾರ್ತೆ ಮುಳಬಾಗಲು ಸೆ.1
ತಾಲೂಕಿಗೆ ಸುವರ್ಣ ಗ್ರಾಮದೋಯ ಯೋಜನೆಯಡಿ 5ನೇ ಹಂತದ ಹಣ ಮಂಜೂರಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಭಾನುವಾರ ಸುವರ್ಣ ಗ್ರಾಮ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ 19.72 ಲಕ್ಷ ದೇವರಾಯಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಪನ್ನಹಳ್ಳಿ ಗ್ರಾಮದಲ್ಲಿ 42.69 ಲಕ್ಷ, ಕೀಲುಹೊಳಲಿ ಗ್ರಾಮದಲ್ಲಿ 21.88 ಲಕ್ಷ, ಬಲ್ಲ ಗ್ರಾಮದಲ್ಲಿ 25.54 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಲಲಿತಮ್ಮ ರಾಜಣ್ಣ, ಉಪಾಧ್ಯಕ್ಷ ಸೋಮಶೇಖರ್, ಸದಸ್ಯರಾದ ರತ್ನಮ್ಮ, ಎಂ.ವಿ. ವೆಂಕಟೇಶನ್, ವೆಂಕಟರಾಮಪ್ಪ, ಕೀಲುಹೊಳಲಿ ಚಂಗಲರಾಯಪ್ಪ, ಭಾಗ್ಯಲಕ್ಷ್ಮಿ ಮಂಜುನಾಥ್, ಸುರೇಶ್, ಮಾರ್ಕೋಂಡಪ್ಪ, ದೇವರಾಯಸಮುದ್ರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ, ವೆಂಕಟೇಶಪ್ಪ ಮತ್ತು ರಾಮಪ್ಪ ಮುಂತಾದವರು ಭಾಗವಹಿಸಿದ್ದರು.