ದೇಶೀಯ ಕ್ರೀಡೆ ಉಳಿಸಿ ಬೆಳೆಸಿ'
ಕ.ಪ್ರ.ವಾರ್ತೆ ಮಾಲೂರು ಸೆ. 3
ಕ್ರೀಡಾಕೂಟಗಳಲ್ಲಿ ದೇಶಿಯ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ದೇಶಿಯ ಕ್ರೀಡೆಗಳನ್ನು ಬೆಳೆಸಬೇಕೆಂದು ತಾಲೂಕು ಪಂಚಾಯತಿ ಅಧ್ಯಕ್ಷ ಪುಟ್ಟಸ್ವಾಮಿ ಕರೆ ನೀಡಿದರು.
ಅವರು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತ ನಮ್ಮ ದೇಶದಲ್ಲಿ ವಿದೇಶ ಕ್ರೀಡೆಯಾದ ಕ್ರಿಕೆಟ್ಗೆ ಸಿಕ್ಕಿರುವ ಮಾನ್ಯತೆ ದೇಶಿಯ ಕ್ರೀಡೆಗೆ ಸಿಗುದಿರುವುದು ಬೇಸರ ಸಂಗತಿ. ಗ್ರಾಮೀಣ ಪ್ರತಿಭೆಗಳನ್ನು ಹೊರತರುವಂತಹ ಇಂತಹ ಕ್ರೀಡಾಕೂಟದಲ್ಲಿ ದೇಶಿಯ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ. ದೊರೆಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ನಾಗರಾಜ್, ಪ್ರಾಂಶುಪಾಲ ಹೆಚ್.ಪಿ. ಶಿವಾನಂದ, ಕೆ. ವೆಂಕಟೇಶಪ್ಪ, ರಾಮಚಂದ್ರಪ್ಪ, ಹೆಚ್. ರಾಮಚಂದ್ರಪ್ಪ, ಬಿಇಓ ಸುಬ್ರಮಣಿ, ದೈಹಿಕ ಶಿಕ್ಷಣ ಪರೀಕ್ಷಕ ಸುರೇಶ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಸೂರ್ಯನಾರಾಯಣರಾವ್ ಇದ್ದರು.
ಶಾಸಕರ ಗೈರು, 4 ಗಂಟೆ ತಡವಾದ ಕ್ರೀಡಾಕೂಟ-ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಬೇಕಾಗಿದ್ದ ಕ್ರೀಡಾಕೂಟವು ಶಾಸಕ ಮಂಜುನಾಥ್ ಗೌಡರಿಗೆ ಕಾಯಲಾಗಿತ್ತು. ಶಾಸಕರು ತಡವಾಗಿ ಬರುವ ಮಾಹಿತಿ ಸಿಕ್ಕದ ನಂತರ ಉಳಿದ ಗಣ್ಯರಿಂದ ಉದ್ಘಾಟನೆ ಮಾಡಿಸದೆ ಕ್ರೀಡೆಗಳಿಗೆ ಶಾಸಕರ ಗೈರು ಹಾಜರಿಯಲ್ಲಿ ಚಾಲನೆ ನೀಡಲಾಯಿತು.ಮಧ್ಯಾಹ್ನ 1 ಗಂಟೆಯಾದರೂ ಶಾಸಕರು ಬಾರದ ಹಿನ್ನೆಲೆಯಲ್ಲಿ ಸಮಾರಂಭಕ್ಕೆ ಬಂದು ವಾಪಸು ಹೋಗಿದ್ದ ತಾ.ಪಂ. ಅಧ್ಯಕ್ಷರನ್ನು ಮನವಿ ಮೂಲಕ ಮತ್ತೆ ಕರೆಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.