ಮಂಚೇನಹಳ್ಳಿ ಗ್ರಾಪಂ; ಶ್ರೀರಂಗಪ್ಪ ಅಧ್ಯಕ್ಷ, ನರಸಮ್ಮ ಉಪಾಧ್ಯಕ್ಷೆ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಗ್ರಾಮ ಪಂಚಾಯ್ತಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಎಂ.ಪಿ. ಶ್ರೀರಂಗಪ್ಪ ಅವಿರೋಧವಾಗಿ (ಸಾಮಾನ್ಯ) ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ನರಸಮ್ಮ ಪರಿಶಿಷ್ಟ ಮೀಸಲು ಮಹಿಳೆ ಸ್ಥಾನಕ್ಕೆ ಆಯ್ಕೆಯಾದರು.
ಚುನಾವಣಾ ಅಧಿಕಾರಿ ಕೆ.ವಿ. ರೆಡ್ಡಪ್ಪ ಇ.ಓ ಗೌರಿಬಿದನೂರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಸಿದ್ದು ಪರಿಶೀಲಿಸಿ ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಘೋಷಣೆ ಮಾಡಿ ಹೂವು ಮಾಲೆ ಹಾಕುವ ಮುಖಾಂತರ ಅವರನ್ನು ಅಭಿನಂದಿಸಿದರು. ಪಿಡಿಓ ರವೀಂದ್ರ ಮತ್ತು ಕಾರ್ಯದರ್ಶಿ ಆದಿನಾರಾಯಣಪ್ಪ ಹಾಜರಿದ್ದರು.
ಗ್ರಾಮ ಪಂಚಾಯ್ತಿಯಲ್ಲಿ 19 ಸದಸ್ಯರ ಬಲವಿದ್ದು ಸದಸ್ಯರು ಮತ್ತು ಮುಖಂಡರು ಸೇರಿ ಅವಿರೋಧ ಆಯ್ಕೆಯಾಗಲು ಒಪ್ಪಿ ಆಯ್ಕೆಯಾಗಲು ಸಹಕರಿಸಿದ್ದರು.