ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅರ್ಹರಿಗೆ ಸೌಲಭ್ಯ ತಲುಪಲು ಒಗ್ಗಟ್ಟಿಂದ ಕೆಲಸ ಮಾಡಿ

Rashmi Kasaragodu
Updated On : 5 Sept 2013, 12:35 pm

ಚಿಂತಾಮಣಿ: ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಕೈ ಸೇರಲು ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಲ್ಲಿ ಸಹಕಾರ ಸಂಘ ಸಂಸ್ಥೆಗಳು ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.
ಪಟ್ಟಣದ ಪಿಟೀಲ್ ಲೇಔಟ್ ಬಳಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ. ಆಡಳಿತ ಮಂಡಳಿ ಚುನಾವಣೆಯಲ್ಲಿ ಬಹುಮತ ಪಡೆದ 5 ಜನರ ಸದಸ್ಯರನ್ನು ಅಭಿನಂದಿಸಿ ಹೂಮಾಲೆ ಹಾಕಿ ನಂತರ ಮಾತನಾಡಿದರು.
ಸೆಪ್ಟೆಂಬರ್ 12 ರಂದು ಅಧ್ಯಕ್ಷರ ಚುನಾವಣೆ ನಡೆಯಬಹುದು. ಐದು ಜನ ನಿರ್ದೇಶಕರು ಗೆಲ್ಲಲು ಶ್ರಮವಹಿಸಿ ಕೆಲಸ ಮಾಡಿದ ಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹಾಗೂ ಮುಖಂಡರಿಗೂ ಈ ಸಂದರ್ಭದಲ್ಲಿ ಶಾಸಕರು ಎಲ್ಲರ ಗೆಲುವೆಂದು ಸಂತಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಕೋಮುಲ್ ನಿರ್ದೇಶಕ ಟಿ.ಎನ್.ರಾಜಗೋಪಾಲ್, ಹಲವಾರು ಸಹಕಾರ ಸಂಘ ಸಂಸ್ಥೆಗಳು ರಾಜಕೀಯ ಪ್ರವೇಶದಿಂದ ಅಭಿವೃದ್ಧಿ ಕಾಣದೆ ಮುಚ್ಚಿವೆ. ಅರ್ಹ ರೈತರಿಗೆ ಸಾಲ ಮತ್ತು ಸೌಲಭ್ಯಗಳನ್ನು ಕಲ್ಪಿಸಲು ರಾಜಕೀಯ ಬದಿಗಿಟ್ಟು ರೈತರ ಅಭಿವೃದ್ಧಿ ಬಗ್ಗೆ ಒತ್ತು ನೀಡಿದಲ್ಲಿ ಮಾತ್ರ ಸಹಕಾರ ಸಂಘಗಳು ಉಳಿಯಲು ಸಾಧ್ಯವೆಂದು ಹೇಳಿದರು.
ಆಯ್ಕೆಯಲ್ಲಿ ಗೊಂದಲವಿಲ್ಲ: ನಗರಸಭೆ ನೂತನ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ವತಿಯಿಂದ 16 ಸದಸ್ಯರು ವಿಜೇತರಾಗಿದ್ದು, ಬಿಸಿಎಂ(ಎ) ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲು ಇರುವುದರಿಂದ ಯಾವುದೇ ಲಾಭಿ ಇಲ್ಲದೆ, ಶಾಸಕರು ಹೇಳಿದಂತೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆಯೆಂದು ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗೂ ಕೋಮುಲ್ ನಿರ್ದೆಶಕ ಟಿ.ಎನ್.ರಾಜಗೋಪಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಾಮಣಿ ಕ್ಷೇತ್ರದಲ್ಲಿ ಕಳೆದ 60 ವರ್ಷಗಳ ಕುಟುಂಬ ರಾಜಕಾರಣಕ್ಕೆ ಜನರು ತೀರ್ಪು ನೀಡಿದ್ದಕ್ಕಾಗಿ ನಗರಸಭೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಇದಕ್ಕೆ ಊಹಾಪೋಹಗಳು ಕಿವಿಗೊಡಬಾರದೆಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಜಿ.ರವೀಂದ್ರಗೌಡ, ಎಂ.ಶಿವಾರೆಡ್ಡಿ, ದೊಡ್ಡಮುನಿವೆಂಕಟಪ್ಪ, ಎಸ್.ಎನ್.ರಾಮಪ್ಪ, ಮುನಿರತ್ನಮ್ಮ ಮತ್ತು ಮುಖಂಡರಾದ ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ರಾಚಾಪುರ ಶ್ರೀನಿವಾಸ್, ಯನುಮಲಪಾಡಿ ಚಂದ್ರಾರೆಡ್ಡಿ, ಕೃಷ್ಣೋಜಿರಾವ್ ಸೇರಿದಂತೆ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement