ಜನಪದ ಗೀತೆಗಳು ಗ್ರಾಮೀಣದಲ್ಲೇ ಕಣ್ಮರೆ: ವಿಷಾದ
ಕ.ಪ್ರ.ವಾರ್ತೆ ಶಿಡ್ಲಘಟ್ಟ ಸೆ. 4
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದಂತಹ ಜನಪದ ಗೀತೆಗಳು ಇಂದು ಗ್ರಾಮೀಣ ಪ್ರದೇಶದಲ್ಲೇ ಕಣ್ಮರೆಯಾಗುತ್ತಿರುವುದು ದುರಂತ ಎಂದು ಜನಪದ ಗಾಯಕ ಬಂಡ್ಲಹಳ್ಳಿ ವಿಜಯಕುಮಾರ್ ವಿಷಾದ ವ್ಯಕ್ತಪಡಿಸಿದರು.
ಸರ್ಕಾರಿ ಬಾಲಕರ ಕೋಟೆ ಶಾಲೆಯಲ್ಲಿ ಇತ್ತೀಚೆಗೆ ಸವಿತಾ ವಿವಿಧೋದ್ದೇಶ ಸಹಕಾರ ಸಂಘ, ಸ್ವಾಮಿ ವಿವೇಕಾನಂದ ಯುವಜನ ಸಂಘ ಹಾಗೂ ರಂಗಸಂಸ್ಥಾನದ ಸಹಯೋಗದಲ್ಲಿ ಏರ್ಪಡಿಸಿದ್ದ ಜನಪದ ಗೀತೆ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಶಿಬಿರದ ಶಿಕ್ಷಕಿ ವಿಜಯಕುಮಾರಿ ಮಾತನಾಡಿ, ಜನಪದ ಸಾಹಿತ್ಯವನ್ನು ಮಕ್ಕಳಿಗೆ ಕಲಿಸುವ ದೃಷ್ಟಿಯಿಂದ ಶಿಬಿರ ನಡೆಸುತ್ತಿದ್ದು, ಮಕ್ಕಳಿಗಿದು ಬಹಳ ಉಪಯುಕ್ತವಾಗಿದೆ.
ಮಕ್ಕಳು ಶಿಕ್ಷಣದ ಜೊತೆಗೆ ಸಂಗೀತವನ್ನು ಕಲಿಯುವುದರಿಂದ ಮಾನಸಿಕವಾಗಿ ಉಲ್ಲಾಸಗೊಂಡು ಶಿಕ್ಷಣದ ಕಡೆ ಗಮನ ಹರಿಸುತಾರೆ ಎಂದರು.
ಆಕಾಶವಾಣಿ ಹಾಡುಗಾರ್ತಿ ಚೇತನಾ, ಸವಿತಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ಸ್ವಾಮಿ ವಿವೇಕಾನಂದ ಯುವಜನ ಸಂಘದ ಮಂಜು ಕಿರಣ್, ನರೇಶ್, ಚಂದ್ರು ಮತ್ತಿತರರು ಹಾಜರಿದ್ದರು.